ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸೊಸೆ ಮನೆ ಬಿಟ್ಟು ಹೋಗಿದ್ದಾಳೆ. ಆಕೆ ಮನೆಗೆ ಬರಲಿ ಎನ್ನುವ ಕಾರಣಕ್ಕೆ ಅತ್ತೆ ನಾಲಿಗೆ ಕತ್ತರಿಸಿ ಅದನ್ನು ದೇವರ ಫೋಟೋ ಮುಂದೆ ಇಟ್ಟಿದ್ದಾಳೆ.
ಸೊಸೆ ಮನೆ ಬಿಟ್ಟು ಹೋಗ್ತಿದ್ದಂತೆ ಅತ್ತೆ ನಾಲಿಗೆ ಕತ್ತರಿಸಿಕೊಂಡಿದ್ದಾಳೆ. ಈಶ್ವರನ ಫೋಟೋ ಮುಂದೆ ನಾಲಿಗೆ ಇಟ್ಟಿದ್ದಾಳೆ. ವಿಷ್ಯ ತಿಳಿದ ಕುಟುಂಬಸ್ಥರು ತಕ್ಷಣ ಆಕೆಯನ್ನು ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಳ್ಳಿಯಲ್ಲಿ ಯಾರಾದರೂ ಓಡಿಹೋದಾಗ, ಮತ್ತ್ಯಾರಾದ್ರೂ ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿದರೆ, ಓಡಿಹೋದ ವ್ಯಕ್ತಿ ಹಿಂತಿರುಗಿ ಬರುತ್ತಾನೆ ಎಂಬ ನಂಬಿಕೆ ಅವರದ್ದು. ಹಾಗಾಗಿ ಈ ಮಹಿಳೆ ಕೂಡ ನಾಲಿಗೆ ಕತ್ತರಿಸಿಕೊಂಡಿದ್ದಾಳೆ. ಸೊಸೆ ಒಂದೂವರೆ ವರ್ಷದ ಮಗು ಜೊತೆ ಪ್ರೇಮಿ ಜೊತೆ ಓಡಿಹೋಗಿದ್ದಾಳೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.