ಕೋವಿಡ್-19 ಸೋಂಕು ಎದುರಿಸಲು ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ವಿಶಿಷ್ಟವಾದ ಹಾರ್ಮೋನುಗಳು ಹಾಗೂ ಕ್ರೋಮೋಸೋಮ್ ಗಳ ಕಾರಣದಿಂದಾಗಿ ಮಹಿಳೆಯರಿಗೆ ಈ ಹೆಚ್ಚುವರಿ ಶಕ್ತಿ ಇದೆ ಎಂದು ಕೆನಡಾದ ಆಲ್ಬರ್ಟಾ ವಿವಿಯ ಸಂಶೋಧಕ ಗೆವಿನ್ ಔಡಿಟ್ ಹೇಳುತ್ತಾರೆ.
ಎಕ್ಸ್ ಕ್ರೋಮೋಸೋಮ್ ಆಗಿರುವ ACE2 ಕಿಣ್ವಗಳು ಸಾರ್ಸ್ ಕೋವಿಡ್ ವೈರಾಣುಗಳಲ್ಲದೇ, ಹೃದ್ರೋಗ, ಶ್ವಾಸಕೋಶ ಹಾಗೂ ಕಿಡ್ನಿ ಸಂಬಂಧಿ ಕಾಯಿಲೆಗಳ ವಿರುದ್ಧ ಕವಚದಂತೆ ಕೆಲಸ ಮಾಡುತ್ತವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಮಹಿಳೆಯರ ಕ್ರೋಮೋಸೋಮ್ ಗಳ ಕಾರಣದಿಂದಾಗಿ ಈ ACE2ನ ಎರಡು ಪ್ರತಿಗಳು ಅವರಲ್ಲಿ ಇದ್ದು, ಇಂಥ ಒಂದೇ ಒಂದು ACE2 ಕಿಣ್ವ ಹೊಂದಿರುವ ಪುರುಷರಿಗಿಂತಲೂ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದ್ದಾರೆ ಎನ್ನುವ ಔಡಿಟ್, ಇದೇ ಕಾರಣದಿಂದಾಗಿ ಕೊರೊನಾ ವೈರಾಣುವಿನ ಸಮಸ್ಯೆಗಳಿಂದ ಮಹಿಳೆಯರನ್ನು ಈ ಕಿಣ್ವಗಳು ತಡೆಗಟ್ಟುತ್ತವೆ ಎಂದು ಹೇಳುತ್ತಾರೆ.