ವಂಶವಾಹಿಗಳಿಂದ ಬರುವ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರು ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ರೋಬಾಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ರಾಜಸ್ಥಾನದ ಕೋಟಾದವರಾದ 31 ವರ್ಷ ವಯಸ್ಸಿನ ಈ ಮಹಿಳೆ ಮಲ್ಟಿಪಲ್ ಎಂಡೋಕ್ರೈನ್ ನಿಯೋಪ್ಲೇಸಿಯಾ ಟೈಪ್2 (ಮೆನ್2ಎ) ಎಂಬ ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಬಂದಾಗ ಎರಡಕ್ಕಿಂತ ಹೆಚ್ಚು ಗ್ರಂಥಿಗಳಲ್ಲಿ ಟ್ಯೂಮರ್ ಗಡ್ಡೆ ಬೆಳೆಯುತ್ತದೆ. ಥೈರಾಯ್ಡ್, ಪ್ಯಾರಾಥೈರಾಯ್ಡ್ ಅಥವಾ ಅಡ್ರೆನಲ್ ಗ್ರಂಥಿಗಳಲ್ಲಿ ಹೀಗೆ ಆಗುತ್ತದೆ.
ಪೇಷೆಂಟ್‌ನ ಥೈರಾಯ್ಡ್, ಅಡ್ರೆನಲ್ ಗ್ರಂಥಿಗಳ ಬಳಿ ಈ ಟ್ಯೂಮರ್‌ಗಳು ಇರುವುದನ್ನು ಪತ್ತೆ ಮಾಡಿದ್ದು, 35,000ದಲ್ಲಿ ಒಬ್ಬರಿಗೆ ಮಾತ್ರವೇ ಹೀಗೆ ಆಗುತ್ತದೆ ಎನ್ನಲಾಗಿದೆ.
ಮೈಗ್ರೇನ್ ಸಮಸ್ಯೆ ನಿವಾರಿಸಲು ಈ ಯೋಗಾಭ್ಯಾಸವನ್ನು ಪ್ರತಿದಿನ ಮಾಡಿ
ಭಾರೀ ನಾಜೂಕಾಗಿ ಎರಡು ಕಡೆಗಳಲ್ಲಿ ದೇಹವನ್ನು ಕೊಯ್ಯಬೇಕಾಗಿದ್ದು, ರಕ್ತನಾಳಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಹೀಗಾಗಿ ರೋಬಾಟ್ ಸೂಚಿತ ಸರ್ಜರಿಗೆ ಮುಂದಾಗಿದ್ದಾಗಿ ವೈದ್ಯರು ತಿಳಿಸಿದ್ದಾರೆ.
“ಅಕ್ಕಪಕ್ಕದ ಯಾವುದೇ ಸ್ನಾಯುಗಳು ಅಥವಾ ರಕ್ತನಾಳಗಳಿಗೆ ಸ್ವಲ್ಪವೂ ಹಾನಿ ಮಾಡದೇ, ಕನಿಷ್ಠ ಮಟ್ಟದ ರಕ್ತ ಸೋರಿಕೆ ಖಾತ್ರಿಪಡಿಸಿಕೊಂಡು, ಟ್ಯೂಮರ್ ಗಡ್ಡೆಗಳನ್ನು ಹೊರತೆಗೆಯಲು ನಾವು ಸಫಲರಾಗಿದ್ದೇವೆ” ಎಂದು ಸರ್ಜರಿಯಲ್ಲಿ ಭಾಗಿಯಾಗಿದ್ದ ವೈದ್ಯ ಡಾ. ಪ್ರಸಾದ್ ತಿಳಿಸಿದ್ದಾರೆ.