alex Certify ಹೆಚ್​ಐವಿ ಸೋಂಕಿತೆಗೆ ಮಾಸಿಕ 7500 ರೂ. ನೀಡುವಂತೆ ಆದೇಶ ನೀಡಿದ ಕೋರ್ಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್​ಐವಿ ಸೋಂಕಿತೆಗೆ ಮಾಸಿಕ 7500 ರೂ. ನೀಡುವಂತೆ ಆದೇಶ ನೀಡಿದ ಕೋರ್ಟ್​

2018ರಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಗರ್ಭಿಣಿ ಮಹಿಳೆಗೆ ತಪ್ಪಾಗಿ ರಕ್ತ ವರ್ಗಾವಣೆ ಮಾಡಿದ ಕಾರಣ ಆಕೆ ಹೆಚ್​ಐವಿ ಸೋಂಕಿತೆಯಾಗುವಂತೆ ಮಾಡಿತ್ತು. ರಕ್ತ ಹೀನತೆಯಿಂದ ಬಳಲುತ್ತಿದ್ದ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಸತ್ತೂರು ಗ್ರಾಮದ ಮಹಿಳೆ ಈ ರೀತಿಯ ಸಂಕಷ್ಟಕ್ಕೆ ಸಿಲುಕಿದ್ದರು. ಈ ವಿಚಾರ ದೇಶಮಟ್ಟದಲ್ಲಿ ಸುದ್ದಿ ಮಾಡಿತ್ತು.

ಯಾರೋ ಮಾಡಿದ ತಪ್ಪಿಗೆ ಮಹಿಳೆ ಏಡ್ಸ್ ರೋಗಕ್ಕೆ ಈಡಾಗುವಂತೆ ಮಾಡಿತ್ತು. ಆದರೆ ಆಕೆಗೆ ಜನಿಸಿದ ಮಗುವಿಗೆ 2019ರ ಜುಲೈನಲ್ಲಿ ಹೆಚ್​ವಿಐ ಪರೀಕ್ಷೆ ನಡೆಸಲಾಗಿ ಆ ಮಗುವಿನ ವರದಿಯಲ್ಲಿ ಹೆಚ್​ಐವಿ ನೆಗೆಟಿವ್​ ಬಂದಿತ್ತು.

ಈ ಘಟನೆ ಬಳಿಕ ಸಂತ್ರಸ್ತೆಗೆ ಸೂಕ್ತ ಪರಿಹಾರ ನೀಡಬೇಕೆಂದು ಕೋರಿ ಕೋರ್ಟ್​ಗೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಸರ್ಕಾರದ ಬಳಿ ಆಕೆ 25 ಲಕ್ಷ ರೂಪಾಯಿ ಪರಿಹಾರ ಹಾಗೂ ವಾಸಿಸಲು ಮನೆ ನೀಡುವಂತೆ ಸೂಚನೆ ನೀಡಿತ್ತು.

ಇದಾದ ಬಳಿಕ ಮತ್ತೊಮ್ಮೆ ನ್ಯಾಯಮೂರ್ತಿ ಎನ್​. ಕಿರುಬಾಕರನ್​ ಹಾಗೂ ಬಿ. ಪುಗಲೆಂಧಿ ನೇತೃತ್ವದ ಪೀಠದ ಮುಂದೆ ಹಾಜರಾದ ಸಂತ್ರಸ್ತೆ ಸಂಬಂಧ ಪಟ್ಟ ಇಲಾಖೆಯಿಂದ ನನಗೆ ಹೆಚ್ಚಿನ ನೆರವಿನ ಅಗತ್ಯವಿದೆ ಎಂದು ಕೋರಿದ್ದಾಳೆ.

ನನ್ನ ಆರೋಗ್ಯ ದೃಷ್ಟಿಯಿಂದ ನಿತ್ಯ ಪೋಷಕಾಂಶಯುಕ್ತ ಆಹಾರ ಹಣ್ಣು – ಹಂಪಲನ್ನ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಅವೆಲ್ಲವನ್ನ ಭರಿಸುವ ಶಕ್ತಿ ನನಗಿಲ್ಲ ಎಂದು ಕೋರ್ಟ್ ಮುಂದೆ ಮಹಿಳೆ ಹೇಳಿಕೊಂಡಿದ್ದಳು.

ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಮಹಿಳೆ ಪ್ರತಿ ತಿಂಗಳು 7,500 ರೂಪಾಯಿ ಹಣವನ್ನ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೇ ತನ್ನ ಹಿಂದಿನ ನಿರ್ದೇಶನವನ್ನ ಪುನರುಚ್ಚರಿಸಿದ ಕೋರ್ಟ್ ಆಕೆಗೆ ಸೂಕ್ತವಾದ ಸರ್ಕಾರಿ ಕೆಲಸ ನೀಡುವಂತೆ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...