ನವದೆಹಲಿ: ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆ ‘ಮೇರಿ ಸಹೇಲಿ’ ಕಾರ್ಯಕ್ರಮ ಆರಂಭಿಸಿದೆ.
ಅಕ್ಟೋಬರ್, ನವಂಬರ್ ನಲ್ಲಿ ಹಬ್ಬದ ಸೀಸನ್ ಆಗಿರುವುದರಿಂದ ಜನರ ಬೇಡಿಕೆಗೆ ತಕ್ಕಂತೆ ವಿಶೇಷ ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ಆರಂಭಿಸಿದೆ.
ಮಾನವ ಕಳ್ಳಸಾಗಣೆ ಜಾಲ ಇಂತಹ ಸಂದರ್ಭವನ್ನು ಬಳಸಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ‘ಮೇರಿ ಸಹೇಲಿ’ ಎಂಬ ಕಾರ್ಯಕ್ರಮವನ್ನು ರೈಲ್ವೆ ಇಲಾಖೆ ಆರಂಭಿಸಿದೆ.