
ಸಾಮಾನ್ಯವಾಗಿ ಇಂತಹ ಸಾಹಸಗಳನ್ನ ಮಾಡುವಾಗ ಅಥ್ಲೆಟಿಕ್ ಇಲ್ಲವೇ ಜಿಮ್ನಾಸ್ಟಿಕ್ ಉಡುಪುಗಳನ್ನ ಧರಿಸಲಾಗುತ್ತೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬಳು ಸೀರೆ ಧರಿಸಿ ಹಿಮ್ಮುಖ ನೆಗೆತ ಹಾರಿದ್ದಾಳೆ.
ಸಂಗೀತಾ ವೇರಿಯರ್ ಎಂಬ ಟ್ವೀಟರ್ ಬಳಕೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಕಿರಣ್ ರಿಜಿಜು ಹಾಗೂ ಸ್ಮೃತಿ ಇರಾನಿ ಅವರನ್ನ ಟ್ಯಾಗ್ ಮಾಡಲಾಗಿದೆ. ಮಹಿಳೆಯನ್ನ ಮಿಲಿ ಸರ್ಕಾರ್ ಎಂದು ಗುರುತಿಸಲಾಗಿದೆ.