ಮಧ್ಯ ಪ್ರದೇಶದಲ್ಲಿ 28 ವರ್ಷದ ಮಹಿಳೆಯೊಬ್ಬರು ಕೈ-ಕಾಲುಗಳಿಲ್ಲದ ಮಗುವಿಗೆ ಜನ್ಮವಿತ್ತಿದ್ದಾರೆ. ಜೆನೆಟಿಕ್ ಸಮಸ್ಯೆಯ ಅಪರೂಪದ ನಿದರ್ಶನ ಇದಾಗಿದೆ.
ಈ ಮಗುವು ಇಲ್ಲಿನ ವಿಧಿಶಾ ಜಿಲ್ಲೆಯ ಸಿರೋಂಜಿ ತಾಲ್ಲೂಕಿನ ಸಕಾ ಗ್ರಾಮದಲ್ಲಿ ಜರುಗಿದೆ. ಟೆಟ್ರಾ-ಅಮೇಲಿಯಾ ಎಂಬ ಕಾಂಜೆನಿಟಲ್ ಸಮಸ್ಯೆಯ ಈ ಮಗುವಿಗೆ ಕೈ-ಕಾಲುಗಳು ಇಲ್ಲ. ವಂಶವಾಹಿಗಳ ವರ್ಗವಣೆ ಸಂದರ್ಭದಲ್ಲಿ WNT3 ಪ್ರೊಟೀನ್‌ಗಳನ್ನು ಕೋಶಗಳು ಸ್ರವಿಸದ ಕಾರಣ ಹೀಗೆ ಆಗುತ್ತದೆ ಎಂದು ತಿಳಿದುಬಂದಿದೆ.
ಇದರ ಹೊರತಾಗಿ ಮಗುವಿಗೆ ಬೇರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಲ್ಲ ಎಂದು ತಿಳಿದುಬಂದಿದೆ. ಕೋವಿಡ್-19 ಲಾಕ್‌ಡೌನ್ ಕಾರಣದಿಂದ ಹೆರಿಗೆಯನ್ನು ಮನೆಯಲ್ಲೇ ಮಾಡಲಾಗಿದೆ.