ತಾನು ಆರ್ಡರ್ ಮಾಡಿದ್ದು ವೆಜ್ ಪಿಜ್ಜಾ, ತನಗೆ ತಲುಪಿಸಿದ್ದು ನಾನ್ ವೆಜ್ ಪಿಜ್ಜಾ. ಇದರಿಂದ ನನಗೆ ಹಿಂಸೆಯಾಗಿದೆ, ನನಗೆ ಒಂದು ಕೋಟಿ ರೂ. ಪರಿಹಾರ ಕೊಡಿಸಿ ಎಂದು ಮಹಿಳೆಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಸಂಗ ನಡೆದಿದೆ.
ಪಿಜ್ಜಾ ರೆಸ್ಟೋರೆಂಟ್ ಒಂದರ ವಿರುದ್ಧ ದೀಪಾಲಿ ತ್ಯಾಗಿ ಎಂಬಾಕೆ ಕೋರ್ಟ್ ಕದತಟ್ಟಿದ್ದಾರೆ. ತನ್ನ ಅರ್ಜಿಯಲ್ಲಿ, ಧಾರ್ಮಿಕ ನಂಬಿಕೆಗಳು, ಕುಟುಂಬ ಸಂಪ್ರದಾಯಗಳು, ಸ್ವಂತ ಮನಸ್ಸಾಕ್ಷಿ ಮತ್ತು ಆಯ್ಕೆಯಿಂದಾಗಿ ತಾನು ಶುದ್ಧ ಸಸ್ಯಾಹಾರಿ ಎಂದು ಹೇಳಿಕೊಂಡಿದ್ದಾರೆ.
2019 ಮಾರ್ಚ್ 21ರಂದು ದೀಪಾಲಿ ತ್ಯಾಗಿ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿರುವ ತನ್ನ ನಿವಾಸಕ್ಕೆ ಸಸ್ಯಾಹಾರಿ ಪಿಜ್ಜಾಕ್ಕಾಗಿ ಆರ್ಡರ್ ನೀಡಿದರು. ಆ ದಿನ, ಹೋಳಿಯ ಸಂದರ್ಭವಾಗಿದ್ದು, ಹಬ್ಬ ಆಚರಿಸಿದ ನಂತರ ಕುಟುಂಬ ಹಸಿವಿನಿಂದ ಬಳಲುತ್ತಿತ್ತು. ಕಂಪನಿಯು ನೀಡಿದ 30 ನಿಮಿಷಗಳ ವಿತರಣಾ ಸಮಯದ ಮಿತಿಯನ್ನು ಮೀರಿ ಪಿಜ್ಜಾವನ್ನು ತಡವಾಗಿ ವಿತರಿಸಲಾಯಿತು ಎಂದು ಆಕೆ ಹೇಳಿಕೊಂಡಿದ್ದಾರೆ.
ಆರೋಗ್ಯಕರ ʼಬ್ರೇಕ್ ಫಾಸ್ಟ್ʼ ಟ್ರೆಂಡ್ ಸಖತ್ ವೈರಲ್
ಹಸಿವಿದ್ದ ಕಾರಣ ಆರ್ಡರ್ ಪಡೆದರೂ, ಆ ಕ್ಷಣದಲ್ಲಿಯೇ ಇದು ಮಾಂಸಾಹಾರಿ ಪಿಜ್ಜಾ ಮತ್ತು ಮಶ್ರೂಮ್ ಬದಲಿಗೆ ಮಾಂಸದ ತುಂಡುಗಳಿವೆ ಎಂದು ಅರಿತು ಹೌಹಾರಿದ್ದಾರೆ.
ಬಳಿಕ ನ್ಯಾಯಕೋರಿ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪಿಜ್ಜಾ ಸರಬರಾಜುಮಾಡಿದ್ದ ಕಂಪೆನಿಯ ಜಿಲ್ಲಾ ವ್ಯವಸ್ಥಾಪಕ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿ, ಆಕೆಗೆ ಕರೆ ಮಾಡಿ, ಇಡೀ ಕುಟುಂಬಕ್ಕೆ ಪಿಜ್ಜಾಗಳನ್ನು ಉಚಿತವಾಗಿ ನೀಡುವ ಪ್ರಸ್ತಾಪವನ್ನು ನೀಡಿದರು. ಆಕೆ ತಿರಸ್ಕರಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಆಕೆಯ ಕೋರಿಕೆಗೆ ಯಾವ ಮಟ್ಟಿನ ನ್ಯಾಯ ಸಿಗುತ್ತದೆ ಕಾದು ನೋಡಬೇಕಿದೆ.