ಮಹಿಳೆಯೊಬ್ಬರು ಲಂಗೂರ್ ಗೆ ತುತ್ತು ಉಣಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆದ್ದಿದೆ.
ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಮಯೂರೇಶ್ವರ್ ಮೂಲದ ಚಾಂದ್ ದಾಸ್ ಎಂಬುವರು ಫೇಸ್ ಬುಕ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಮಹಿಳೆ ಲಂಗೂರ್ ಗೆ ಅನ್ನ ಮತ್ತು ತರಕಾರಿಗಳನ್ನು ತಿನ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ವಿಶೇಷವಾಗಿ ತನ್ನ ಮಗುವಿಗೆ ವಾತ್ಸಲ್ಯಭರಿತವಾಗಿ ಊಟ ನೀಡುವಂತೆ ಲಂಗೂರ್ ಗೂ ನೀಡಿದ್ದಾರೆ.
ಲಂಗೂರ್ ಕೂಡ ತಾಳ್ಮೆಯಿಂದ ಮಗುವಿನಂತೆ ಕುಳಿತು, ತಾಯಿ ಕೊಟ್ಟ ತುತ್ತು ತಿನ್ನುವುದನ್ನು ನೋಡಬಹುದಾಗಿದೆ. ಈ ವಿಡಿಯೊ 1.3 ಮಿಲಿಯನ್ ವೀಕ್ಷಣೆ ಕಂಡಿದ್ದು, 22,000ಕ್ಕೂ ಹೆಚ್ಚು ಶೇರ್ ಮತ್ತು 20,000 ಪ್ರತಿಕ್ರಿಯೆ ಪಡೆದುಕೊಂಡಿದೆ.
https://www.facebook.com/100005901104757/videos/1420737674799589/?t=1