ಮನುಷ್ಯನ ಪ್ರಾಣಿ ಪ್ರೀತಿಗೆ ಆಗಿಂದಾಗ್ಗೆ ಒಂದಷ್ಟು ವಿಶೇಷ ಉದಾಹರಣೆಗಳು ಬೆಳಕಿಗೆ ಬರುತ್ತಿರುತ್ತವೆ. ಇದೀಗ ಮಹಿಳೆಯೊಬ್ಬರು ಅಳಿಲಿಗೆ ಬಾಳೆಹಣ್ಣನ್ನು ತಿನ್ನಿಸುವ ವಿಡಿಯೋ ವೈರಲ್ ಆಗಿದೆ.
17 ಸೆಕೆಂಡುಗಳ ವಿಡಿಯೋ ಕ್ಲಿಪ್ಅನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ ನಂದ ಅವರು ಪೋಸ್ಟ್ ಮಾಡಿದ್ದಾರೆ.
ಮಹಿಳೆಯು ಬಾಳೆಹಣ್ಣಿನ ಸಿಪ್ಪೆ ಸುಲಿದು ಅಳಿಲಿನ ಕಡೆಗೆ ಹಿಡಿಯುತ್ತಿದ್ದಂತೆ ಓಡಿಬರುವ ಅಳಿಲು ಒಂದು ಕಾಲಿನಲ್ಲಿ ಬಾಳೆಹಣ್ಣನ್ನು ಹಿಡಿದು ಪುಟ್ಟ ಬಾಯಲ್ಲಿ ಗಬಗಬನೆ ತಿನ್ನುತ್ತದೆ. ಇದು ನೆಟ್ಟಿಗರ ಹೃದಯ ಗೆದ್ದಿದೆ.
ಈ ವಿಡಿಯೋ ಜೊತೆಗೆ ಸುಶಾಂತ ನಂದ ಅವರು ಭಗವಾನ್ ಬುದ್ಧನ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ, ಎಲ್ಲಾ ಜೀವಿಗಳ ಬಗ್ಗೆ ದಯೆ ತೋರಿ, ಅದೇ ನಿಜವಾದ ಧರ್ಮ ಎಂದು ಶಿರ್ಷಿಕೆ ನೀಡಿದ್ದಾರೆ.