ಕೊರೊನಾ ಹೆಮ್ಮಾರಿಯಿಂದಾಗಿ ಇಡೀ ದೇಶದ ವ್ಯವಸ್ಥೆಯೇ ಬದಲಾಗುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ರೋಗ ಇದಾದ್ದರಿಂದ ಸೋಂಕಿತರ ಸಂಪರ್ಕದಲ್ಲಿರುವವರನ್ನೂ ಕ್ವಾರಂಟೈನ್ ಮಾಡಲಾಗುತ್ತದೆ. ಈ ನಿಯಮವನ್ನೇ ಬಳಸಿಕೊಂಡ ಪ್ರೇಮಿಗಳು ಇದೀಗ ಇಲಾಖೆಯನ್ನೇ ಯಾಮಾರಿಸಿದ್ದಾರೆ.
ಹೌದು, ನಾಗಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರು ಇಂತಹ ಕೆಲಸ ಮಾಡಿದ್ದಾರೆ. ತಮಗೆ ಕೊರೊನಾ ಬಂದ ಬೆನ್ನಲ್ಲೇ ತನ್ನ ಪ್ರಿಯಕರನನ್ನು ಪತಿ ಎಂದು ಸುಳ್ಳು ಹೇಳಿ ಆತನನ್ನೂ ಕ್ವಾರಂಟೈನ್‌ಗೆ ಕಳುಹಿಸಲು ಇಲಾಖೆ ಬಳಿ ಈ ಪೇದೆ ಮನವಿ ಮಾಡಿದ್ದಾರೆ. ಸ್ಥಳೀಯ ಆಡಳಿತಕ್ಕೆ ಈ ಸತ್ಯಾಂಶ ಗೊತ್ತಿಲ್ಲದೆ ಅವಳ ಮಾತನ್ನು ನಂಬಿ ಆತನನ್ನೂ ಕ್ವಾರಂಟೈನ್‌ಗೆ ಹಾಕಲಾಗಿದೆ.
ಇನ್ನು ಈ ಅವಿವಾಹಿತ ಮಹಿಳಾ ಕಾನ್ಸ್‌ಟೇಬಲ್ ಪ್ರಿಯಕರ ವಿವಾಹಿತ ಎಂದು ಹೇಳಲಾಗುತ್ತಿದೆ. ತನ್ನ ಪತಿ ಮನೆಗೆ ಬಂದಿಲ್ಲ ಎಂದು ತಿಳಿದ ವಿವಾಹಿತನ ಪತ್ನಿ ವಿಚಾರಿಸಿದಾಗ ಈ ಕೆಲಸ ಬಹಿರಂಗಗೊಂಡಿದೆ. ನಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾಳೆ ವಿವಾಹಿತನ ಪತ್ನಿ.