ಹೈದರಾಬಾದ್: ತೆಲಂಗಾಣದ ನಲಗೊಂಡ ಜಿಲ್ಲೆಯ ಸೆತ್ತಿಪಲ್ಲೇಮ್ ಯುವತಿಯ ಮೇಲೆ ಗಂಡ ಸೇರಿದಂತೆ 139 ಮಂದಿ 9 ತಿಂಗಳಿಂದ ನಿರಂತರ ಅತ್ಯಾಚಾರ ಎಸಗಿದ್ದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
25 ವರ್ಷದ ಯುವತಿ ಮಿರ್ಯಾಲಾಗೂಡಾದ ಕೊಂಡರೆಡ್ಡಿ ರಮೇಶ್ ಎಂಬುವನನ್ನು ಮದುವೆಯಾಗಿದ್ದು ಮದುವೆಯಾದ ಮೂರು ತಿಂಗಳು ಚೆನ್ನಾಗಿದ್ದ ರಮೇಶ್ ಬಳಿಕ ಪತ್ನಿಗೆ ಹಿಂಸೆ ನೀಡಲು ಆರಂಭಿಸಿದ್ದ. ಪತ್ನಿಗೆ ಬಲವಂತವಾಗಿ ಮದ್ಯ ಕುಡಿಸಿ, ಗಾಂಜಾ ತಿನ್ನಿಸಿ ಆಕೆಯನ್ನು ಬೆದರಿಸುತ್ತಿದ್ದ. ಅಲ್ಲದೇ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಎಸಗಿದ್ದಾನೆ.
9 ತಿಂಗಳು ಅತ್ಯಾಚಾರವೆಸಗಿದ್ದು ಆಕೆಯ ಫೋಟೋ ಮತ್ತು ವಿಡಿಯೋಗಳನ್ನೂ ಪೋರ್ನ್ ಸೈಟ್ ಗಳಿಗೆ ಅಪ್ಲೋಡ್ ಮಾಡಲಾಗಿದೆ. ಗಂಡನಿಂದ ದೂರವಾಗಿರುವ ಯುವತಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ. ಹೈದರಾಬಾದ್ ನ ಪಂಜಾಗುಟ್ಟ ಪೊಲೀಸ್ ಠಾಣೆಗೆ 139 ಜನರ ವಿರುದ್ಧ ಅತ್ಯಾಚಾರ, ಕೊಲೆ ಬೆದರಿಕೆ ಆರೋಪದಡಿ ದೂರು ನೀಡಿದ್ದಾಳೆ.
ಯುವತಿಯ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯಲಾಗಿದ್ದು ಪೋರ್ನ್ ಸೈಟ್ ಗಳಲ್ಲಿಯೂ ಫೋಟೋ, ವಿಡಿಯೋ ಹರಿದಾಡುತ್ತಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆನ್ನಲಾಗಿದೆ.