alex Certify ಲ್ಯಾಪ್ ​ಟಾಪ್​ ಚಾರ್ಜರ್​ನಿಂದ ತಯಾರಾಯ್ತು ಕುಕ್ಕೀಸ್​..! ನೆಟ್ಟಿಗರು ಶಾಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲ್ಯಾಪ್ ​ಟಾಪ್​ ಚಾರ್ಜರ್​ನಿಂದ ತಯಾರಾಯ್ತು ಕುಕ್ಕೀಸ್​..! ನೆಟ್ಟಿಗರು ಶಾಕ್​

ಇಂಟರ್​ನೆಟ್​ನಲ್ಲಿ ತಮಾಷೆಯ ವಿಡಿಯೋಗಳಿಗೆ ಏನೂ ಕೊರತೆಯಿಲ್ಲ. ಅದರಲ್ಲೂ ಟ್ವಿಟರ್​​ನಲ್ಲಂತೂ ಕೆಲ ವಿಡಿಯೋಗಳನ್ನ ನೋಡ್ತಿದ್ರೆ ನಿಜವಾಗಲೂ ಹೀಗೆಲ್ಲ ಮಾಡೋಕೆ ಸಾಧ್ಯವಾ ಎಂದು ನಮಗೆ ಎನಿಸದೇ ಇರದು. ಈ ಮಾತಿಗೆ ಉದಾಹರಣೆ ಎಂಬಂತೆ ಟ್ವಿಟೀಗರೊಬ್ಬರು ಲ್ಯಾಪ್​ಟಾಪ್​ ಚಾರ್ಜರ್​ನಲ್ಲಿ ಕುಕ್ಕೀಸ್​ ಬೇಯಿಸುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಅರೆ..! ಇದು ಹೇಗೆ ಸಾಧ್ಯ ಎಂದು ಯೋಚನೆ ಮಾಡ್ತಿದ್ದೀರಾ..? ಈ ವಿಡಿಯೋ ಪ್ರಕಾರ ಲ್ಯಾಪ್​ಟಾಪ್​ ಚಾರ್ಜರ್​ ಓವನ್​ ಮಾಡುವ ಕೆಲಸವನ್ನೂ ಮಾಡುತ್ತೆ ಎಂದಾಯ್ತು. ಚಾರ್ಜಿಂಗ್​ ವೇಳೆ ಬಿಸಿಯಾಗಿದ್ದ ಲ್ಯಾಪ್​ಟಾಪ್​ ಚಾರ್ಜರ್​ ಮೇಲೆ ಈ ರೀತಿ ಕುಕ್ಕೀಸ್​ ಬೇಯಿಸಲಾಗಿದೆ.

ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ಎರಡು ಫೋಟೋಗಳಲ್ಲಿ ಮೊದಲ ಫೋಟೋದಲ್ಲಿ ಕುಕ್ಕಿ ಹಿಟ್ಟಿನ ಉಂಡೆ ರೂಪದಲ್ಲಿ ಇರೋದನ್ನ ಕಾಣಬಹುದಾಗಿದೆ. ಈ ಉಂಡೆಯನ್ನ ಲ್ಯಾಪ್​ಟಾಪ್​ ಚಾರ್ಜರ್​​ನಲ್ಲಿ ಇರಿಸಲಾಯ್ತು. ಎರಡನೇ ಚಿತ್ರದಲ್ಲಿ ಕುಕ್ಕೀಸ್​ನ್ನು ನೀವು ನೋಡಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...