ದೇಶಾದ್ಯಂತ ಕೋವಿಡ್-19 ಲಸಿಕೆ ಕಾರ್ಯಕ್ರಮ ಬಿರುಸಿನಿಂದ ಸಾಗುತ್ತಿದೆ. ಈ ನಡುವೆ ಮಧ್ಯ ಪ್ರದೇಶದ ಭೋಪಾಲ್ ಜಿಲ್ಲೆಯ 106 ವರ್ಷದ ಮಹಿಳೆಯೊಬ್ಬರು ತಮ್ಮ ಮೊದಲ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.
ಭೋಪಾಲ್‌ನ ಬೆರಾಸಿಯಾ ಪ್ರದೇಶದ ಲಸಿಕಾ ಕೇಂದ್ರವೊಂದರಲ್ಲಿ ಇವರಿಗೆ ಲಸಿಕೆ ಹಾಕಲಾಗಿದೆ ಎಂದು ರಾಜ್ಯ ಪಿಆರ್ ಇಲಾಖೆ ತಿಳಿಸಿದೆ.
ಕೊರೋನಾ ಲಸಿಕೆ ಇಂಜೆಕ್ಷನ್ ಗೆ ಹೆದರುವವರಿಗೆ ಗುಡ್ ನ್ಯೂಸ್
ಜಿಲ್ಲೆಯ ಬಿಲ್ಕೋ ಗ್ರಾಮದ ಕಾಮ್ಲಿ ಬಾಯಿ ಹೆಸರಿನ ಈ ಮಹಿಳೆಯ ಹುಟ್ಟಿದ ದಿನಾಂಕ, ಆಧಾರ್ ಕಾರ್ಡ್ನಲ್ಲಿರುವಂತೆ, ಜನವರಿ 1, 1915 ಆಗಿದೆ.
ಕಳೆದ ಶನಿವಾರ ತುಳ್ಸಾಬಾಯ್ ಹೆಸರಿನ 118 ವರ್ಷದ ಮಹಿಳೆಯೊಬ್ಬರು (ಆಧಾರ್ ಕಾರ್ಡ್ ಪ್ರಕಾರ) ರಾಜ್ಯದ ಸಾಗರ್ ಜಿಲ್ಲೆಯ ಖಿಮ್ಲಾಸಾ ಗ್ರಾಮದಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು.