ನಾವೆಲ್ ಕೊರೊನಾ ವೈರಸ್ ಸಾಂಕ್ರಮಿಕದಿಂದ ರಕ್ಷಣೆ ಪಡೆಯಲು ಮಾಸ್ಕ್ ಧಾರಣೆ ಕಡ್ಡಾಯವಾದ ಕಾರಣ ಈಗ ಎಲ್ಲರಿಗೂ ಮುಖಗವಚ ಅತ್ಯಗತ್ಯ ವಸ್ತುವಾಗಿಬಿಟ್ಟಿದೆ.
ಸೂರತ್ ಮೂಲದ ಹನುಮಾನ್ ಪ್ರಜಾಪತ್ ಹಾಗೂ ರತನ್ ಬೆನ್ ದಂಪತಿಗಳು, ದರ್ಜಿಗಳು ಬಳಸದೇ ಬಿಟ್ಟ ಬಟ್ಟೆಗಳನ್ನು ಬಳಸಿಕೊಂಡು ನಾಲ್ಕು ಪದರದ ಮಾಸ್ಕ್ ಗಳನ್ನು ಹೊಲೆದು ಅಗತ್ಯವಿರುವ ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ. ಗುಜರಾತಿನ ಉದ್ದಗಲಕ್ಕೂ ತೆರಳಿ ಈ ಮಾಸ್ಕ್‌ಗಳನ್ನು ಹಂಚುತ್ತಿರುವ ಈ ದಂಪತಿ, ಇದುವರೆಗೂ 6000+ ಮಾಸ್ಕ್‌ಗಳನ್ನು ವಿತರಿಸಿದ್ದಾರೆ.
ನಿಷ್ಕಾಮ ಕರ್ಮ ಸೇವಾ ಪ್ರತಿಷ್ಠಾನವು ಈ ದಂಪತಿಗೆ ಮಾಸ್ಕ್‌ಗಳನ್ನು ಹೊಲೆಯಲು ಪ್ರೇರಣೆ ನೀಡುತ್ತಿದ್ದು, ರಾಜಸ್ಥಾನದ ಗ್ರಾಮೀಣ ಪ್ರದೇಶದಲ್ಲೂ ಸಹ ತಮ್ಮ ಸೇವೆಯನ್ನು ಮುಂದುವರೆಸಲು ದಂಪತಿಗಳನ್ನು ಕೋರಿಕೊಂಡಿದೆ.