alex Certify ಬೆಳಗಿನ ಜಾವ 4 ಗಂಟೆಗೆ ಎದ್ದು ತಾಯಿಗೆ ಸಂದೇಶ ಕಳಿಸಿದ ಮಗಳು…! ಕಾರಣ ತಿಳಿದ್ರೆ ದಂಗಾಗ್ತೀರಾ….!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗಿನ ಜಾವ 4 ಗಂಟೆಗೆ ಎದ್ದು ತಾಯಿಗೆ ಸಂದೇಶ ಕಳಿಸಿದ ಮಗಳು…! ಕಾರಣ ತಿಳಿದ್ರೆ ದಂಗಾಗ್ತೀರಾ….!!

ನವದೆಹಲಿ: ಮನೆಗಳಲ್ಲಿ ಅಕ್ಕ ತಂಗಿ, ಅಣ್ಣ ತಮ್ಮ ಹೀಗೆ ಒಡ ಹುಟ್ಟಿದವರ ನಡುವೆ ಸಣ್ಣ ಸಣ್ಣ ವಿಷಯಕ್ಕಾಗಿ ಸ್ಪರ್ಧೆ ನಡೆಯುತ್ತಿರುತ್ತದೆ.

ರಾತ್ರಿ ತಂದಿಟ್ಟ ಫಿಜ್ಜಾವನ್ನು ತಂಗಿ ಬೆಳಗ್ಗೆದ್ದು ತಿಂದು ಬಿಡುತ್ತಾಳೆ ಎಂಬ ಆತಂಕದಿ‌ಂದ ಬೆಳಗಿನಜಾವ 4 ಗಂಟೆಗೆ ಎದ್ದ ಅಕ್ಕ ತನ್ನ ಅಮ್ಮನ ಮೊಬೈಲ್ ಗೆ ಕಳಿಸಿದ ಭಾವನಾತ್ಮಕ ಸಂದೇಶ ಈಗ ಸಖತ್ ವೈರಲ್ ಆಗಿದೆ. ಮಗಳು ತನ್ನ ಅಮ್ಮನಿಗೆ ಮೊಬೈಲ್ ನಲ್ಲಿ ಕಳಿಸಿದ ವೈಯಕ್ತಿಕ ಮೆಸೇಜ್‌ನ ಸ್ಕ್ರೀನ್ ಶಾಟ್ ನ್ನು ಇಶಾ ಫಾರ್ ರಿಯಲ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ.

“ನಾನು ಅಕಸ್ಮಾತ್ತಾಗಿ ನಾಲ್ಕು ಗಂಟೆಗೆ ಎದ್ದಿದ್ದೇನೆ. ಇನ್ನು ಎಷ್ಟು ಗಂಟೆಗೆ ಏಳುತ್ತೇನೆ ಎಂದು ಗೊತ್ತಿಲ್ಲ‌. ತಂಗಿ ನನಗಿಂತ ಮುಂಚೆ ಎದ್ದರೆ, ಆಕೆ ನನ್ನ ಪಾಲಿನ ಮೂರು ಪಿಜ್ಜಾ ಭಾಗವನ್ನು ತಿಂದು ಖಾಲಿ ಮಾಡುತ್ತಾಳೆ‌. ಹಾಗೊಮ್ಮೆ ಆಕೆ ಪಿಜ್ಜಾ ತಿನ್ನಲು ಪ್ರಾರಂಭಿಸಿದರೆ ಆಕೆಗೆ ಅಕ್ಕನ ಅನುಮತಿ ಪಡೆಯಲು ಹೇಳು” ಎಂದು ತಾಯಿಗೆ ಸಂದೇಶ ಕಳಿಸಿದ್ದಳು.

ಬೆಳಗ್ಗೆ ಎದ್ದು ನೋಡಿದ ಅಮ್ಮ ಅದಕ್ಕೆ “ಹೇ ಭಗವಾನ್” ಎಂದು ವಾಪಸ್ ಸಂದೇಶ ಕಳಿಸಿದ್ದಳು. ಆದರೆ, ಮೋಜಿನ ಸಂಗತಿ ಎಂದರೆ ಫಿಜ್ಜಾಕ್ಕಾಗಿ ಹೆಣ್ಣು‌ಮಕ್ಕಳಿಬ್ಬರು ಜಗಳವಾಡುತ್ತಿದ್ದರೆ ಎಲ್ಲರಿಗಿಂತ ಮೊದಲೇ ಎದ್ದ ಅಪ್ಪ ಎರಡು ಚೂರು ಫಿಜ್ಜಾ ತಿಂದು ಮುಗಿಸಿದ್ದ. ಬಾಕಿ ಉಳಿದ ಒಂದು ಭಾಗವವನ್ನು ಮೂರು ಚೂರುಗಳಾಗಿ ಮಾಡಿಟ್ಟಿದ್ದ.

https://twitter.com/ishaforreals/status/1302943136646180867?ref_src=twsrc%5Etfw%7Ctwcamp%5Etweetembed%7Ctwterm%5E1302943136646180867%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fwith-ek-ankh-open-at-4-am-girl-texts-mom-to-not-let-sister-eat-pizza-fries-she-left-in-fridge-last-night%2F650260

https://twitter.com/ishaforreals/status/1303199786653241344?ref_src=twsrc%5Etfw%7Ctwcamp%5Etweetembed%7Ctwterm%5E1303199786653241344%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fwith-ek-ankh-open-at-4-am-girl-texts-mom-to-not-let-sister-eat-pizza-fries-she-left-in-fridge-last-night%2F650260

https://twitter.com/khushi_1701/status/1303253442958245889?ref_src=twsrc%5Etfw%7Ctwcamp%5Etweetembed%7Ctwterm%5E1303253442958245889%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fwith-ek-ankh-open-at-4-am-girl-texts-mom-to-not-let-sister-eat-pizza-fries-she-left-in-fridge-last-night%2F650260

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...