![](https://kannadadunia.com/wp-content/uploads/2021/03/airport-timely-arrival-funny-conversation.jpg)
ವಿಮಾನಯಾನ ತಜ್ಞ ಸಂಜೀವ್ ಕಪೂರ್ ತಮ್ಮ ಪತ್ನಿಯ ಜೊತೆ ನಡೆಸಿದ ವಾಟ್ಸಾಪ್ ಚಾಟ್ನ ಸ್ಕ್ರೀನ್ಶಾಟ್ ಒಂದನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಪತ್ನಿಯ ಬಳಿ ಸಂಜೀವ್, ವಿಮಾನ ಸರಿಯಾದ ಸಮಯಕ್ಕೆ ಲ್ಯಾಂಡ್ ಆಗಲಿದೆ. ಮಧ್ಯಾಹ್ನ 12ಗಂಟೆಗೆ ಸರಿಯಾಗಿ ಕಾರನ್ನ ಕಳುಹಿಸು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಪತ್ನಿ ಒಕೆ ಎಂದಿದ್ದಾರೆ. ಕೂಡಲೇ ನಾನು ಕಾರಿನಲ್ಲೇ ಇರುತ್ತೇನೆ. ಹೀಗಾಗಿ ನೀವು ಸರಿಯಾದ ಸಮಯಕ್ಕೆ ಬನ್ನಿ ಎಂದಿದ್ದಾರೆ. ಇದಕ್ಕೆ ಸಂಜೀವ್, ನೀನು ಕೂಡ ಕಾರಿನಲ್ಲಿ ಇರ್ತೀಯಾ ಎಂಬ ವಿಚಾರವನ್ನ ಪೈಲೆಟ್ಗೆ ತಿಳಿಸುತ್ತೇನೆ ಎಂದು ಮೆಸೇಜ್ ಮಾಡಿದ್ದಾರೆ.
ವಿಮಾನಯಾನ ಇಲಾಖೆಯಲ್ಲಿ 20 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಸಿಸಿಒ ವಿಸ್ತಾರಾ ಇದಕ್ಕೆ ಉತ್ತರ ನೀಡಿದ್ದು ನಾನು ಈ ವಿಚಾರವನ್ನ ಪೈಲಟ್ಗೆ ತಿಳಿಸುತ್ತೇನೆ ಎಂದು ಬರೆದಿದ್ದಾರೆ.
ಇದಾದ ಬಳಿಕ ಇನ್ನೊಂದು ಟ್ವೀಟ್ ಶೇರ್ ಮಾಡಿರುವ ಸಂಜೀವ್, ನಾನು ಹೇಳಿದ್ದಕ್ಕಿಂತ ಹೆಚ್ಚು ಸಮಯವನ್ನ ತೆಗೆದುಕೊಂಡೆ. ಇದು ನನ್ನ ಹೊಸ ಮನೆಯೆಂದು ನಾಯಿ ಗೂಡಿನ ಫೋಟೋ ಶೇರ್ ಮಾಡಿದ್ದಾರೆ. ಸಂಜೀವ್ ಕಪೂರ್ರ ಈ ಟ್ವೀಟ್ಗಳು ಸಖತ್ ವೈರಲ್ ಆಗಿವೆ.