ರೈತರಿಗೆ ಕನಿಷ್ಟ ಬೆಂಬಲ ಬೆಲೆ ಖಾತರಿ ಮಾಡಲು ಸಾಧ್ಯವಾಗದಿದ್ದಲ್ಲಿ ರಾಜಕೀಯ ಜೀವನವನ್ನೇ ತ್ಯಜಿಸೋದಾಗಿ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅಭಯ ನೀಡಿದ್ದಾರೆ.
ಕೇಂದ್ರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಎದುರಿಸುತ್ತಿರುವ ಖಟ್ಟರ್, ಹರಿಯಾಣದ 5 ಪುರಸಭೆ ನಿಗಮಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಆಡಳಿತ ಮೈತ್ರಿಕೂಟ ಸೋತ ಬಳಿಕ ಈ ಹೇಳಿಕೆ ನೀಡಿದ್ದಾರೆ.
ಹರಿಯಾಣದಲ್ಲಿ ಎಂಎಸ್ಪಿ ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಒಂದು ವೇಳೆ ಎಂಎಸ್ಪಿ ಕೊನೆಗೊಳಿಸಲು ಯಾರಾದರೂ ಪ್ರಯತ್ನಿಸಿದರೆ ರಾಜಕೀಯ ಜೀವನವನ್ನೇ ತ್ಯಜಿಸೋದಾಗಿ ಖಟ್ಟರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯಾದ ಹಿಸಾರ್ನ ಉಕಲಾನಾ ಹಾಗೂ ರೇವಾರಿಯಾ ಧರುಹೆರಾದ ಸೇರಿದಂತೆ ಮೂರು ಕ್ಷೇತ್ರವನ್ನ ಬಿಜೆಪಿ ಸೋತಿದೆ.