ಕೋವಿಡ್ ಸೋಂಕಿನ ವಿರುದ್ಧದ ಕರ್ತವ್ಯದಲ್ಲಿರುವ ದೆಹಲಿ ಪೊಲೀಸ್ ಪಡೆಯ ಭಾಗವಾಗಿ ಮೃತಪಟ್ಟ ಮೊದಲ ಪೇದೆ ಅಮಿತ್ ರಾಣಾ ಇಹಲೋಕ ತ್ಯಜಿಸಿ ಒಂದು ವರ್ಷ ಕಳೆದರೂ ಸಹ ಅವರ ಮಡದಿಗೆ ಇನ್ನೂ ಪರಿಹಾರದ ಹಣ ಸಿಕ್ಕಿಲ್ಲ.
31 ವರ್ಷದ ಈ ಪೇದೆಯ ಕುಟುಂಬ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದ ಒಂದು ಕೋಟಿ ರೂ. ಪರಿಹಾರದ ಹಣಕ್ಕಾಗಿ ಇನ್ನೂ ಕಾಯುತ್ತಿದೆ.
ಆರ್ಥಿಕ ಸಮಸ್ಯೆಗೆ ಪರಿಹಾರವಾಗಬಲ್ಲದು ಕನ್ನಡಿ
ಹರಿಯಾಣಾದ ಸೋನಿಪತ್ ನಿವಾಸಿಯಾದ ಅಮಿತ್ ರಾಣಾಗೆ ಮಡದಿ ಪೂಜಾ ಹಾಗೂ ಮೂರು ವರ್ಷದ ಮಗನಿದ್ದಾನೆ. ವಾಯುವ್ಯ ದೆಹಲಿಯ ಭರತ್‌ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅಮಿತ್ ಮೃತಪಟ್ಟಿದ್ದರು.
“ಅವರು ಸಾವನ್ನಪ್ಪಿದ ವೇಳೆ ಗರ್ಭಿಣಿಯಾಗಿದ್ದ ನನಗೆ ಈ ವರ್ಷ ಜನವರಿಯಲ್ಲಿ ಹೆಣ್ಣುಮಗು ಜನಿಸಿದೆ. ದೆಹಲಿ ಪೊಲೀಸ್ ವತಿಯಿಂದ ನನಗೆ 23 ಲಕ್ಷ ರೂ.ಗಳು ಬಂದಿದ್ದು, ಕೆಲಸ ಖಾತ್ರಿಯನ್ನೂ ಸಹ ಕೊಟ್ಟಿದ್ದರು. ಆದರೆ ಪರೀಕ್ಷೆಯ ಬಳಿಕವಷ್ಟೇ ಈ ಕೆಲಸವೆಂದ ಕಾರಣಕ್ಕೆ ನಾನು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ನನ್ನ ಪತಿ ಮನೆಯ ಆರ್ಥಿಕ ಸ್ಥಿತಿಗತಿಗಳು ಚೆನ್ನಾಗಿಲ್ಲದಿರುವ ಕಾರಣ, ಈ ವೇಳೆ ನನ್ನ ಹೆತ್ತವರೊಂದಿಗೆ ಇದ್ದೇನೆ ಎಂದಿದ್ದಾರೆ.
ಶಾರೀರಿಕ ಸಂಬಂಧದ ವೇಳೆ ಪುರುಷರು ಮಾಡಬೇಡಿ ಈ ತಪ್ಪು
ಕರ್ತವ್ಯದಲ್ಲಿದ್ದ ವೇಳೆ ಜ್ವರ ಹಾಗೂ ಉಸಿರಾಟದ ಸಮಸ್ಯೆಗೆ ಸಿಲುಕಿದ್ದ ರಾಣಾರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದರು.
ಅಮಿತ್ ಸಾವಿಗೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಸಿಎಂ ಕೇಜ್ರಿವಾಲ್, “ತಮ್ಮ ಪ್ರಾಣ ಲೆಕ್ಕಿಸದ ಅಮಿತ್, ದೆಹಲಿಯ ಜನತೆಯ ಸೇವೆಯನ್ನು ಮುಂದುವರೆಸಿದ್ದರು. ಕೊರೋನಾ ವೈರಸ್‌ಗೆ ಸೋಂಕಿತರಾದ ಅಮಿತ್ ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ. ದೆಹಲಿವಾಸಿಗಳ ಪರವಾಗಿ ನಾನು ಅವರ ಈ ತ್ಯಾಗಕ್ಕೆ ಸಲ್ಯೂಟ್ ಮಾಡುತ್ತೇನೆ. ಅವರ ಕುಟುಂಬಕ್ಕೆ ಗೌರವಧನದ ರೂಪದಲ್ಲಿ ಒಂದು ಕೋಟಿ ರೂ.ಗಳನ್ನು ನೀಡಲಾಗುವುದು” ಎಂದು ತಿಳಿಸಿದ್ದರು.
ಆದರೆ ಇದುವರೆಗೂ ಆ ದುಡ್ಡು ತಮ್ಮನ್ನು ತಲುಪದೇ ಇರುವ ಕಾರಣ ಪೂಜಾ ಅವರು ಖುದ್ದಾಗಿ ಸಿಎಂಗೆ ಪತ್ರ ಬರೆದಿದ್ದಾರೆ. ಈ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲು ದೆಹಲಿ ಸರ್ಕಾರ ನಿರಾಕರಿಸಿದೆ.