ಬಂಧನವಾಗುತ್ತಿದ್ದಂತೆ ಪತ್ನಿ ಮೇಲೆ ತಪ್ಪು ಹೊರೆಸಿದ ಪತಿ 20-04-2021 2:14PM IST / No Comments / Posted In: Corona, Corona Virus News, Latest News, India ದೆಹಲಿಯ ದಂಪತಿಯೊಂದು ಮಾಸ್ಕ್ ವಿಚಾರವಾಗಿ ದೆಹಲಿ ಪೊಲೀಸರ ಜೊತೆ ವಾದ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ. ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘಿಸಿದ್ದು ಹಾಗೂ ಕಾರಿನೊಳಗೆ ಇದ್ದ ವೇಳೆ ಈ ದಂಪತಿ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಇವರನ್ನ ತಡೆದಿದ್ದರು. ಈ ಘಟನೆ ದರ್ಯಾಗಂಜ್ ಏರಿಯಾದಲ್ಲಿ ಭಾನುವಾರ ನಡೆದಿತ್ತು. ಒಂದು ಹಂತದಲ್ಲಿ ಮಹಿಳೆ ನಾನು ನನ್ನ ಗಂಡನಿಗೆ ಕಿಸ್ ಮಾಡ್ತೇನೆ. ಇದನ್ನ ತಪ್ಪಿಸೋಕೆ ನಿಮ್ಮಿಂದ ಸಾಧ್ಯವಿದೆಯೇ..? ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದಳು. ಈ ವಿಡಿಯೋದಲ್ಲಿದ್ದ ಪುರುಷ ಇದೀಗ ತನ್ನ ಹೇಳಿಕೆಯನ್ನ ಬದಲಾಯಿಸಿದ್ದು ಎಲ್ಲಾ ಘಟನೆಗೆ ಸಂಪೂರ್ಣ ತನ್ನ ಪತ್ನಿಯನ್ನ ಹೊಣೆಗಾರಳನ್ನಾಗಿ ಮಾಡಿದ್ದಾನೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ ದೆಹಲಿ ಹೈಕೋರ್ಟ್ ಕಾರಿನಲ್ಲಿ ಒಬ್ಬರೇ ಇದ್ದರೂ ಸಹ ಫೇಸ್ ಮಾಸ್ಕ್ಗಳ ಬಳಕೆ ಕಡ್ಡಾಯ ಎಂದು ಹೇಳಿತ್ತು. ಆದರೆ ಈ ದಂಪತಿ ಮಾತ್ರ ಮಾಸ್ಕ್ ಬಳಕೆ ಮಾಡೋದಕ್ಕೆ ಸುತಾರಾಂ ನಿರಾಕರಿಸಿದ್ದರು. ಈ ಘಟನೆ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಂಕಜ್ ಗುಪ್ತಾ ಹಾಗೂ ಆಭಾ ಗುಪ್ತಾರನ್ನ ಬಂಧಿಸಿದ್ದು ಇಂದು ಕೋರ್ಟ್ಗೆ ಹಾಜರುಪಡಿಸೋ ಸಾಧ್ಯತೆ ಇದೆ. ಇದೀಗ ವರದಿಗಾರರ ಪ್ರಶ್ನೆಗೆ ಉತ್ತರ ನೀಡಿರುವ ಪಂಕಜ್ ಈ ಎಲ್ಲಾ ಗಲಾಟೆಗೆ ತನ್ನ ಪತ್ನಿಯೇ ಕಾರಣ ಎಂದು ದೂರಿದ್ದಾನೆ. ತನ್ನ ಪತ್ನಿ ನನಗೆ ಈ ರೀತಿ ಗಲಾಟೆ ಮಾಡಲು ಪ್ರೇರಣೆ ನೀಡಿದ್ದಾಳೆ. ಇದು ಆಕೆಯ ತಪ್ಪು ಎಂದು ಹೇಳಿದ್ದಾರೆ. ಮಾತ್ರವಲ್ಲದೇ ನನಗೆ ಮಾಸ್ಕ್ ಹಾಕಿಕೊಳ್ಳಬೇಕು ಎಂಬ ಪ್ರಜ್ಞೆ ಇದ್ದರೂ ಸಹ ನನ್ನ ಪತ್ನಿ ಇದಕ್ಕೆ ಅನುಮತಿ ನೀಡಲಿಲ್ಲ ಎಂದು ಹೇಳಿದ್ದಾನೆ. #WATCH | A couple misbehaved with Delhi Police personnel in Daryaganj area earlier today after they were stopped & asked the reason for not wearing face masks. "An FIR under various sections of IPC has been lodged against them," say police. (Video source – Delhi Police) pic.twitter.com/hv1rMln3CU — ANI (@ANI) April 18, 2021 https://twitter.com/i/status/1384121052725317637