alex Certify ಕಾರಿನಲ್ಲಿ ಪ್ರಯಾಣಿಸುವಾಗ ಹಿಂಬದಿ ಸೀಟ್​ ಬೆಲ್ಟ್ ಧರಿಸೋದು ಎಷ್ಟು ಮುಖ್ಯ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನಲ್ಲಿ ಪ್ರಯಾಣಿಸುವಾಗ ಹಿಂಬದಿ ಸೀಟ್​ ಬೆಲ್ಟ್ ಧರಿಸೋದು ಎಷ್ಟು ಮುಖ್ಯ ಗೊತ್ತಾ….?

ಕಾರಿನಲ್ಲಿ ಸೀಟ್​ಬೆಲ್ಟ್ ಧರಿಸುವವರ ಸಂಖ್ಯೆ ಎಷ್ಟಿದೆ ಅನ್ನೋದನ್ನ ಕಂಡು ಹಿಡಿಯೋಕೆ ಅಂತಾ ಪಶ್ಚಿಮ ದೆಹಲಿ ಪೊಲೀಸರು ಕಳೆದ ವಾರ ಆಂದೋಲನವೊಂದನ್ನ ನಡೆಸಿದ್ರು.

ಇದರಲ್ಲಿ ಹಿಂಬದಿ ಸೀಟ್​ ಬೆಲ್ಟ್ ಧರಿಸದ ಕಾರಣಕ್ಕೆ ಪೊಲೀಸರು ಬರೋಬ್ಬರಿ 1 ಸಾವಿರ ಚಲನ್​ಗಳನ್ನ ವಿಧಿಸಿದ್ದಾರೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದರೂ ಸಹ ಸೀಟ್​ ಬೆಲ್ಟ್ ಎಷ್ಟು ಮುಖ್ಯ ಅನ್ನೋದರ ಬಗ್ಗೆ ಜಾಗೃತಿ ಮೂಡಿಸಲು ದೆಹಲಿ ಪೊಲೀಸರು ಈ ಪ್ರಯತ್ನ ಮಾಡಿದ್ದರು.

ಭಾರತದಲ್ಲಿ ಕಾರಿನ ಮುಂಬದಿ ಸೀಟಿನಲ್ಲಿ ಕೂರುವವರು ಸೀಟ್​ ಬೆಲ್ಟ್ ಧರಿಸುವ ಅಭ್ಯಾಸ ಹೊಂದಿದ್ದಾರೆ. ದಂಡ ಬೀಳುತ್ತೆ ಅನ್ನೋ ಭಯ ಹಾಗೂ ಸುರಕ್ಷತಾ ಕಾರಣದಿಂದಾಗಿ ಭಾಗಶಃ ಮಂದಿ ಸೀಟ್​ ಬೆಲ್ಟ್ ಧರಿಸುತ್ತಾರೆ.

ಆದರೆ ಹಿಂಬದಿ ಸವಾರರು ಮಾತ್ರ ಸೀಟ್​ ಬೆಲ್ಟ್​ ಧರಿಸೋದು ಭಾರತದಲ್ಲಿ ಅತಿ ವಿರಳ. ವಿಶ್ವ ಆರೋಗ್ಯ ಸಂಸ್ಥೆ ಹಿಂಬದಿ ಸೀಟ್​ ಧರಿಸೋದ್ರಿಂದ ರಸ್ತೆ ಅಪಘಾತದಲ್ಲಿ ಉಂಟಾಗುವ ಸಾವಿನಲ್ಲಿ 25 ಪ್ರತಿಶತ ಹಾಗೂ ಗಂಭೀರ ಗಾಯಗೊಳ್ಳುವವರನ್ನ 75 ಪ್ರತಿಶತದಷ್ಟು ಕಡಿಮೆ ಮಾಡಿದೆ ಎಂದು ಹೇಳಿದೆ. ಅಪಘಾತದ ವೇಳೆ ಹಿಂಬದಿ ಸವಾರನ ಮುಖ ಮುಂಬದಿಯ ಸೀಟ್​ಗೆ ಹೋಗಿ ಜಪ್ಪುತ್ತೆ. ಇದರಿಂದ ಕುತ್ತಿಗೆಯ ಮೂಳೆ ಮುರಿದು ಹೋಗುವ ಸಾಧ್ಯತೆ ಇರುತ್ತದೆ. ಅನೇಕ ಸಂದರ್ಭಗಳಲ್ಲಿ ಬೆನ್ನುಮೂಳೆ ಮೇಲೂ ಗಂಭೀರ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಚಲನ್​​ಗೆ ಹೆದರಿ ಮಾತ್ರವಲ್ಲದೇ ನಿಮ್ಮ ಸುರಕ್ಷತೆಗಾಗಿಯೂ ಸೀಟ್​ ಬೆಲ್ಟ್ ಧರಿಸೋದನ್ನ ಮರೆಯದಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...