
2014ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾರಿಯಾ ಶರಪೋವಾ ಸಚಿನ್ ತೆಂಡೂಲ್ಕರ್ ಅಂದರೆ ಯಾರೆಂದು ಗೊತ್ತಿಲ್ಲ ಎಂದು ಹೇಳಿದ್ದರು. ಈ ಬಳಿಕ ಶರಪೋವಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರು ಆಕ್ರೋಶ ಹೊರಹಾಕಿದ್ದರು.
ಆದ್ರೀಗ ಸಚಿನ್ ರೈತ ಪ್ರತಿಭಟನೆ ವಿಚಾರದಲ್ಲಿ ಮಾಡಿರುವ ಟ್ವೀಟ್ನಿಂದ ಬೇಸರಗೊಂಡಿರುವ ಕೇರಳಿಗರು. ನೀವು ಹೇಳಿದ್ದು ಸರಿ ಇದೆ. ನೀವು ಗುರುತಿಸುವಂತಹ ಗುಣವನ್ನ ಸಚಿನ್ ಹೊಂದಿಲ್ಲ ಎಂದು ಮಲಯಾಳಂನಲ್ಲಿ ಕಮೆಂಟ್ ಮಾಡಿದ್ದಾರೆ. ಇದೊಂದು ಮಾತ್ರವಲ್ಲದೇ ಕೇರಳದ ಬಹುತೇಕ ಮಂದಿ ಇದೇ ಅರ್ಥದಲ್ಲಿ ಟ್ವೀಟ್ ಮಾಡಿ ಶರಪೋವಾ ಬಳಿಕ ಕ್ಷಮೆ ಯಾಚಿಸಿದ್ದಾರೆ.
ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಕ್ಷಮಾಪಣೆಗಳ ಸುರಿಮಳೆಯೇ ಹರಿಯುತ್ತಿದ್ದಂತೆಯೇ ಮಾರಿಯಾ ಶರಪೋವಾ ಯಾರಾದರೂ ವರ್ಷದ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದೀರಿಯೇ..? ಎಂದು ಟ್ವಿಟರ್ನಲ್ಲಿ ಪ್ರಶ್ನೆ ಮಾಡಿದ್ದಾರೆ.