ಮಾಸ್ಕ್ ಇಲ್ಲದೇ ಫೇಸ್ ಶೀಲ್ಡ್ಗಳನ್ನ ಧರಿಸೋದ್ರಿಂದ ಕೊರೊನಾ ವೈರಸ್ನಿಂದ ಬಚಾವಾಗೋಕೆ ಸಾಧ್ಯವೇ ಇಲ್ಲ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಹತ್ತಿರದಲ್ಲೇ ಯಾರಾದರೂ ಸೀನಿದರೆ ಪ್ಲಾಸ್ಟಿಕ್ ಪರದೆಯ ಮೇಲೂ ಆ ಗಾಳಿ ಹರಿದಾಡೋದ್ರಿಂದ ಅಪಾಯ ಇನ್ನಷ್ಟು ಹೆಚ್ಚಲಿದೆ.
ವಿಶ್ವದ ಅನೇಕ ವಿಶ್ವವಿದ್ಯಾಲಯಗಳು, ರೆಸ್ಟಾರೆಂಟ್ಗಳು ಹಾಗೂ ತುರ್ತು ಸೇವಾ ವಿಭಾಗಗಳ ಸಿಬ್ಬಂದಿಗಳು ಮಾಸ್ಕ್ ಬದಲು ಫೇಸ್ಶೀಲ್ಡ್ಗಳನ್ನ ಬಳಸೋದು ಕಂಡು ಬಂದಿದ್ದರಿಂದ ಈ ಅಧ್ಯಯನ ನಡೆಸಲಾಗಿದೆ.
ಫೇಸ್ ಶೀಲ್ಡ್ ಧರಿಸಿದವರ ಎದುರು ಸೋಂಕಿತ ವ್ಯಕ್ತಿ ಸೀನುವುದರಿಂದ ಆತನ ಸೀನುವಿಕೆಯಿಂದ ಉತ್ಪತ್ತಿಯಾದ ಸುಳಿಯಾಕಾರದ ದ್ರವ ಫೇಸ್ಶೀಲ್ಡ್ಗಳ ಮೇಲೆ ಕುಳಿರುಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಬಟ್ಟೆಗಿಂತ ಪ್ಲಾಸ್ಟಿಕ್ಗಳ ಮೇಲೆ ಹನಿಗಳು ವೇಗವಾಗಿ ಚಲಿಸುತ್ತವೆ. ಇದರಿಂದ ಅಪಾಯ ಜಾಸ್ತಿ ಇದೆ ಹೀಗಾಗಿ ಕೇವಲ ಫೇಸ್ ಶೀಲ್ಡ್ ಒಂದೇ ಕೊರೊನಾ ತಡೆಯಲ್ಲಿ ಯಾವುದೇ ಪಾತ್ರ ವಹಿಸಲಾರದು ಅಂತಾ ವಿಜ್ಞಾನಿಗಳು ಹೇಳಿದ್ದಾರೆ.