
ದಕ್ಷಿಣ ಏಷಿಯಾದ ತನ್ನ ನೆರೆಹೊರೆಯ ರಾಷ್ಟ್ರಗಳಿಗೆ ಹಾಗೂ ಬ್ರೆಜಿಲ್, ಮೊರಸ್ಕೋಗೆ ಭಾರತ ಕೊರೊನಾ ಲಸಿಕೆಗಳನ್ನ ಕಳುಹಿಸಿಕೊಟ್ಟಿದೆ. ಹಾಗೂ ಶೀಘ್ರದಲ್ಲೇ ದಕ್ಷಿಣ ಆಫ್ರಿಕಾ ಕೂಡ ಭಾರತದ ಲಸಿಕೆಗಳನ್ನ ಸ್ವೀಕರಿಸಲಿದೆ.
ಕೊರೊನಾ ವೈರಸ್ ವಿಚಾರದಲ್ಲಿ ನಿರಂತರ ಬೆಂಬಲವನ್ನ ಸೂಚಿಸುತ್ತಿರುವ ಭಾರತ ಹಾಗೂ ಪ್ರಧಾನಿ ಮೋದಿಗೆ ಧನ್ಯವಾದಗಳು. ನಾವು ಒಗ್ಗಟ್ಟಾಗಿ ಕೆಲಸ ಮಾಡಿದ್ರೆ ಮಾತ್ರ ವೈರಸ್ ವಿರುದ್ಧ ಹೋರಾಡಿ ಜೀವ ಸಂಕುಲಗಳನ್ನ ರಕ್ಷಿಸಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧಾನೋಮ್ ಗೆಬ್ರೆಯೋಸಿಸ್ ಟ್ವೀಟ್ ಮಾಡಿದ್ದಾರೆ.
ಭಾರತ ಬಾಂಗ್ಲಾದೇಶ, ನೇಪಾಳ, ಭೂತಾನ್, ಮಾಲ್ಡೀವ್ಸ್ ಸೇರಿದಂತೆ ಹಲವಾರು ರಾಷ್ಟ್ರಗಳು ಕೊರೊನಾ ಲಸಿಕೆ ಪಡೆದಿವೆ. ಮಯನ್ಮಾರ್ ಹಾಗೂ ಶ್ರೀಲಂಕಾ ಸೇರಿದಂತೆ ವಿವಿಧ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಕೋವಿಶೀಲ್ಡ್ ಲಸಿಕೆಯನ್ನ ಪಡೆಯಲಿವೆ .