ಗೂಗಲ್ ಮ್ಯಾಪ್ ಈಗ ಸಾಮಾನ್ಯವಾಗಿದೆ. ಅಪರಿಚಿತ ಪ್ರದೇಶಗಳಲ್ಲಿ ಮಾತ್ರವಲ್ಲ ಪ್ರತಿ ದಿನ ಸಂಚರಿಸುವ ಮಾರ್ಗಗಳಲ್ಲೂ ಜನರು ಗೂಗಲ್ ಮ್ಯಾಪ್ ಬಳಕೆ ಮಾಡ್ತಾರೆ. ನೀವೂ ಗೂಗಲ್ ಮ್ಯಾಪ್ ಬಳಕೆ ಮಾಡ್ತಿದ್ದರೆ ಅದರ ಬಗ್ಗೆ ತಿಳಿದಿರಿ. ಇಲ್ಲವಾದ್ರೆ ದಂಡ ಪಾವತಿ ಮಾಡಬೇಕಾಗುತ್ತದೆ.
ಸಾಮಾನ್ಯವಾಗಿ ಜನರು ಚಾಲನೆ ಮಾಡುವಾಗ ಗೂಗಲ್ ಮ್ಯಾಪ್ ನ್ಯಾವಿಗೇಷನ್ ಆನ್ ಮಾಡುತ್ತಾರೆ. ಇದು ಮಾರ್ಗವನ್ನು ಹೇಳುವ ಜೊತೆಗೆ ಎಲ್ಲಿ ಜಾಮ್ ಆಗಿದೆ ಎಂಬ ಸೂಚನೆಯನ್ನೂ ನೀಡುತ್ತದೆ. ಜಾಮ್ ಆಗಿರುವುದು ಮೊದಲೇ ಗೊತ್ತಾಗುವುದ್ರಿಂದ ಚಾಲಕರು ಮಾರ್ಗ ಬದಲಿಸುತ್ತಾರೆ.
ನೀವು ಕಾರಿನಲ್ಲಿ ಗೂಗಲ್ ಮ್ಯಾಪ್ ಬಳಕೆ ಮಾಡ್ತಿದ್ದು, ಕಾರಿನ ಡ್ಯಾಶ್ ಬೋರ್ಡ್‌ಗೆ ಮೊಬೈಲ್ ಹೋಲ್ಡರ್ ಹಾಕಿಲ್ಲವೆಂದ್ರೆ ಈಗ್ಲೇ ಹಾಕಿ. ಇಲ್ಲವೆಂದ್ರೆ ಟ್ರಾಫಿಕ್ ಪೊಲೀಸರಿಗೆ ದಂಡ ನೀಡಬೇಕಾಗುತ್ತದೆ.
ಕೈನಲ್ಲಿ ಮೊಬೈಲ್ ಹಿಡಿದು ಮ್ಯಾಪ್ ನೋಡ್ತಾ ಹೋಗ್ತಿದ್ದರೆ ಅಪಘಾತವಾಗುವ ಸಾಧ್ಯತೆಯಿರುತ್ತದೆ. ಇದು ಸಂಚಾರಿ ನಿಯಮ ಉಲ್ಲಂಘನೆ ಮಾಡಿದಂತೆ. ಟ್ರಾಫಿಕ್ ಪೊಲೀಸರು 5 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದು. ಡ್ಯಾಶ್ ಬೋರ್ಡ್ ಗೆ ಮೊಬೈಲ್ ಹೋಲ್ಡರ್ ಹಾಕಿದ್ರೆ ಯಾವುದೇ ಸಮಸ್ಯೆ ಇರುವುದಿಲ್ಲ.