alex Certify ಕೊರೊನಾ ರೋಗಿಗಳು ಯಾವ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಬೇಕು..? 6 ನಿಮಿಷ ವಾಕಿಂಗ್​ ಮಾಡಿ ಬಳಿಕ ನಿರ್ಧಾರ ಮಾಡಿ ಎಂದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ರೋಗಿಗಳು ಯಾವ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಬೇಕು..? 6 ನಿಮಿಷ ವಾಕಿಂಗ್​ ಮಾಡಿ ಬಳಿಕ ನಿರ್ಧಾರ ಮಾಡಿ ಎಂದ ವೈದ್ಯರು

ದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬರ್ತಿರೋ ಹಿನ್ನೆಲೆ ಆಸ್ಪತ್ರೆಗಳಲ್ಲಿ ಬೆಡ್​ ಸೌಲಭ್ಯ ಸಿಗುತ್ತಿಲ್ಲ. ಇದಕ್ಕಾಗಿ ವೈದ್ಯರು ಪಾಸಿಟಿವ್​ ರಿಸಲ್ಟ್ ಬರುತ್ತಿದ್ದಂತೆಯೇ ಆಸ್ಪತ್ರೆಗೆ ಧಾವಿಸಬೇಡಿ ಎಂದು ಮನವಿ ಮಾಡ್ತಿದ್ದಾರೆ. ಕೆಲವೊಂದು ಕೊರೊನಾ ಸೋಂಕಿತರು ಮನೆಯಲ್ಲಿದ್ದುಕೊಂಡೇ ಡೆಡ್ಲಿ ವೈರಸ್​ನಿಂದ ಮುಕ್ತಿ ಹೊಂದಬಹುದಾಗಿದೆ.

ಮನೆಯಲ್ಲೇ ಇರುವ ರೋಗಿಗಳು ಪೋಷಕಾಂಶಗಳುಳ್ಳ ಆಹಾರವನ್ನ ಸೇವನೆ ಮಾಡೋದ್ರ ಜೊತೆಗೆ ಸಾಕಷ್ಟು ನೀರು ಸೇವನೆ, ಯೋಗಾಸನ, ಪ್ರಾಣಾಯಾಮಗಳನ್ನ ಮಾಡಬೇಕು.

ಮಾತ್ರವಲ್ಲದೇ ತಮ್ಮ ಜ್ವರ ಹಾಗೂ ಆಮ್ಲಜನಕದ ಪ್ರಮಾಣವನ್ನ ಆಗಾಗ ಪರೀಕ್ಷೆ ಮಾಡುತ್ತಲೇ ಇರಬೇಕು. ಐಸೋಲೇಷನ್​ನಲ್ಲಿರುವ ವ್ಯಕ್ತಿ 6 ನಿಮಿಷ ವಾಕಿಂಗ್​ ಮಾಡುವ ಮುನ್ನ ಹಾಗೂ ನಂತರ ತಮ್ಮ ದೇಹದ ಆಮ್ಲಜನಕ ಮಟ್ಟ ಎಷ್ಟಿದೆ ಎಂಬುದನ್ನ ಪರೀಕ್ಷೆ ಮಾಡಿಕೊಳ್ಳಬೇಕು.

ಈ ರೀತಿ ದಿನಕ್ಕೆ ಕಡಿಮೆ ಎಂದರೂ 2 ರಿಂದ 3 ಬಾರಿ ಮಾಡಿ. ಈ ವೇಳೆಯಲ್ಲಿ ನಿಮ್ಮ ಆಮ್ಲಜನಕ ಮಟ್ಟ ನಾರ್ಮಲ್​ ಆಗಿದ್ದರೆ ನೀವು ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ ಎಂದು ಟಾಟಾ ಮೆಮೊರಿಯಲ್ ಆಸ್ಪತ್ರೆ ನಿರ್ದೇಶಕ ಡಾ. ಸಿಎಸ್​ ಪ್ರಮೇಶ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...