ಮೊಸಳೆ ಹಾಗೂ ಆಮೆಗಳ ನಡುವೆ ಏನಾದ್ರೂ ಫೈಟ್ ಆದರೆ ಯಾರು ಗೆಲ್ಲಬಹುದು…? ಮೊಸಳೆಯ ಬಾಯಿಗೆ ಆಮೆ ಒಂದು ಸಣ್ಣ ತುತ್ತಾಗಬಹುದು ಎಂದು ಬಹುತೇಕರು ಭಾವಿಸುತ್ತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ ಆಮೆಯೇ ಮೊಸಳೆಗೆ ಭಯಂಕರವಾಗಿ ಆಟವಾಡಿಸಿದೆ.
ಹಸಿದ ಮೊಸಳೆಯೊಂದು ಆಮೆಯನ್ನು ತಿನ್ನಲು ಯತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಮೆಯ ಗಟ್ಟಿಯಾದ ಚಿಪ್ಪನ್ನು ಹಲ್ಲಿನಿಂದ ಮೊಸಳೆಗೆ ಕಡಿಯಲು ಸಾಧ್ಯವಾಗಿಲ್ಲ.
ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಭಾರತೀಯ ಕಂದಾಯ ಸೇವೆ ಅಧಿಕಾರಿ ಸವೀದ್ ಟ್ರುಂಬೂ, “ಜಗತ್ತಿನಲ್ಲಿ ನೀವೇನಾದ್ರು ಬದುಕಿಕೊಳ್ಳಬೇಕೆಂದರೆ ಗಟ್ಟಿ ಚರ್ಮ ಹಾಗೂ ಬಲವಾದ ಮನಸ್ಸು ಅತ್ಯಗತ್ಯ. ನೀವು ಬಿಡದೇ ಇದ್ದಲ್ಲಿ ಯಾರಿಂದಲೂ ಸಹ ನಿಮ್ಮನ್ನು ಮಣಿಸಲು ಸಾಧ್ಯವಿಲ್ಲ” ಎಂದು ಬರೆದಿದ್ದಾರೆ.