ವಾಟ್ಸಾಪ್ ಜೀವನದ ಒಂದು ಭಾಗವಾಗಿದೆ. ವಾಟ್ಸಾಪ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ವಾಟ್ಸಾಪ್ ಗ್ರೂಪ್ ನಲ್ಲಿ ಕಚೇರಿ ಸೇರಿದಂತೆ ಖಾಸಗಿ ವಿಷ್ಯಗಳನ್ನೂ ಹಂಚಿಕೊಳ್ಳಲಾಗುತ್ತದೆ. ಗ್ರೂಪ್ ಗೆ ಎಂಟ್ರಿ ಪಡೆಯುವ ಅಪರಿಚಿತ, ಗ್ರೂಪ್ ಸದಸ್ಯರ ಎಲ್ಲ ಮಾಹಿತಿ ಪಡೆಯುತ್ತಾನೆ.
ಗೂಗಲ್ ಸರ್ಚ್ ಮೂಲಕ ನಿಮ್ಮ ವೈಯಕ್ತಿಕ ಚಾಟ್ ಗೆ ಪ್ರವೇಶ ಮಾಡಲಾಗುತ್ತದೆ. 2019ರಲ್ಲಿ ಇದನ್ನು ಸರಿ ಮಾಡಲಾಗಿತ್ತು. ಆದ್ರೆ ಈಗ್ಲೂ ಈ ಸಮಸ್ಯೆ ಕಾಡ್ತಿದೆ. ವಾಟ್ಸಾಪ್ ಗ್ರೂಪ್ ಗೆ ಇಂಡೆಕ್ಸ್ ಸಕ್ರಿಯಗೊಳಿಸಿದ ನಂತ್ರ ಖಾಸಗಿ ಗುಂಪಿನ ಹುಡುಕಾಟಕ್ಕೆ ವೆಬ್ ನಲ್ಲಿ ಸರ್ಚ್ ಮಾಡಬಹುದು. ಇದ್ರಲ್ಲಿ ಸರ್ಚ್ ಮಾಡುವ ಜನರಿಗೆ ಗುಂಪಿನಲ್ಲಿರುವ ಇನ್ನೊಬ್ಬರ ಪ್ರೊಫೈಲ್ ಫೋಟೋ ಹಾಗೂ ಫೋನ್ ನಂಬರ್ ಪಡೆಯುವ ಅನುಮತಿ ಸಿಗುತ್ತದೆ. ಗೂಗಲ್ ಸರ್ಚ್ ನಲ್ಲಿ ಸುಮಾರು 1,500 ಗ್ರೂಪ್ ಇನ್‌ವಾಯ್ಸ್ ಲಿಂಕ್‌ಗಳಿವೆ ಎಂಬುದು ಬಹಿರಂಗವಾಗಿದೆ.
ಗ್ರೂಪ್ ಸದಸ್ಯರು ಅಪರಿಚಿತ ವ್ಯಕ್ತಿಯನ್ನು ನೋಡಲು ಸಾಧ್ಯವಾಗುವುದಿಲ್ಲ. ಅಪರಿಚಿತ ವ್ಯಕ್ತಿ ಸ್ವಲ್ಪ ಸಮಯದವರೆಗೆ ತನ್ನನ್ನು ಮರೆಮಾಡಬಹುದು. ಅಪರಿಚಿತ ವ್ಯಕ್ತಿಯನ್ನು ಗುಂಪಿನಿಂದ ತೆಗೆದು ಹಾಕಲಾಗಿದ್ದರೂ ಅವನ ಫೋನ್ ನಂಬರ್, ಸಂಕ್ಷಿಪ್ತ ಮಾಹಿತಿ ಅಲ್ಲಿರುತ್ತದೆ.