ದೇಶದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಇಂದು ಲಸಿಕೆ ತೆಗೆದುಕೊಂಡ ಮೊದಲ 60 ವರ್ಷದ ಮೇಲಿನ ವ್ಯಕ್ತಿ ಆಗಿದ್ದಾರೆ. ಇಂದಿನಿಂದ 45 ವರ್ಷ ಮೇಲ್ಪಟ್ಟ ಅನಾರೋಗ್ಯ ಹೊಂದಿರುವವರಿಗೂ ಲಸಿಕೆ ಸಿಗಲಿದೆ.
ದೆಹಲಿಯ ಏಮ್ಸ್ನಲ್ಲಿ ಪ್ರಧಾನಿ ಮೋದಿ ಲಸಿಕೆ ಸ್ವೀಕರಿಸುವ ವೇಳೆ ಆಸ್ಸಾಂನ ಸ್ಕಾರ್ಫ್ನ್ನು ಧರಿಸಿದ್ದಾರೆ. ಕೇರಳದ ರೋಸಮ್ಮ ಅನಿಲ್ ಹಾಗೂ ಪುದುಚೆರಿಯ ಪಿ. ನಿವೇದಾ ಪ್ರಧಾನಿ ಮೋದಿಗೆ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ನೀಡಿದ್ದಾರೆ.
ನನ್ನ ಮೊದಲ ಡೋಸ್ ಕೊರೊನಾ ಲಸಿಕೆಯನ್ನ ಏಮ್ಸ್ನಲ್ಲಿ ಪಡೆದಿದ್ದೇನೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಶೀಘ್ರಗತಿಯ ಕೆಲಸ ಮಾಡುತ್ತಿರುವ ವೈದ್ಯರು ಹಾಗೂ ವಿಜ್ಞಾನಿಗಳ ಕಾರ್ಯ ಮಹತ್ವವಾದದ್ದು. ಲಸಿಕೆಗೆ ಅರ್ಹರಿರುವ ಎಲ್ಲರೂ ಈ ಅಭಿಯಾನದಲ್ಲಿ ಭಾಗಿಯಾಗುವ ಮೂಲಕ ಭಾರತವನ್ನ ಕೋವಿಡ್ ಮುಕ್ತ ರಾಷ್ಟ್ರವನ್ನಾಗಿ ಮಾಡೋಣ ಎಂದು ಟ್ವೀಟಾಯಿಸಿದ್ದಾರೆ.
ಪ್ರಧಾನಿ ಮೋದಿಗೆ ಮುಖ್ಯ ನರ್ಸ್ ಪಿ. ನಿವೇದಾ ಲಸಿಕೆ ನೀಡಿದ ಬಳಿಕ ಪ್ರಧಾನಿ ಮೋದಿ, ನೀವು ಲಸಿಕೆ ಚುಚ್ಚಿಬಿಟ್ರಾ..? ನನಗೆ ಗೊತ್ತೇ ಆಗಿಲ್ಲ ಎಂದು ಹೇಳಿದ್ದಾರಂತೆ.
ಪಿ. ನಿವೇದಾ, ಏಮ್ಸ್ನಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಧಾನಿ ಮೋದಿ ಲಸಿಕೆ ಸ್ವೀಕರಿಸಲು ಬರ್ತಿದ್ದಾರೆ ಎಂಬ ವಿಚಾರ ನಿವೇದಾಗೆ ಇಂದು ಬೆಳಗ್ಗೆಯಷ್ಟೇ ತಿಳಿದಿದೆ.
ಪ್ರಧಾನಿ ಮೋದಿ ಪಡೆದುಕೊಂಡ ʼಕೊರೊನಾʼ ಲಸಿಕೆ ಯಾವುದು ಗೊತ್ತಾ…?
ನನ್ನನ್ನ ಲಸಿಕೆ ಕೇಂದ್ರಕ್ಕೆ ಡ್ಯೂಟಿಗೆ ಹಾಕಿದ್ದರು. ಇಂದು ಬೆಳಗ್ಗೆ ನನ್ನನ್ನ ಕರೆದು ಪ್ರಧಾನಿ ಮೋದಿ ಬರ್ತಿದ್ದಾರೆ ಎಂದು ಹೇಳಿದ್ರು. ನನಗೆ ಪ್ರಧಾನಿ ಮೋದಿಯನ್ನ ಭೇಟಿಯಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾತನಾಡಿದ ಕೇರಳದ ನರ್ಸ್ ರೋಸಮ್ಮ, ನನಗೂ ಕೂಡ ಇದು ಆಶ್ಚರ್ಯಕರ ಸಂಗತಿಯಾಗಿದೆ. ಮೋದಿ ಸರ್ ಜೊತೆ ನಮಗೆ ಮಾತನಾಡಿದ್ದು ಖುಷಿ ಕೊಡ್ತು ಎಂದು ಹೇಳಿದ್ದಾರೆ.