alex Certify ಕೋವಿಡ್‌ ಲಸಿಕೆ ಹಂಚಿಕೆ ತಯಾರಿ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ಲಸಿಕೆ ಹಂಚಿಕೆ ತಯಾರಿ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ತಲುಪಿಸಲು ಸರ್ಕಾರ ಭರದಿಂದ ಸಿದ್ಧತೆ ನಡೆಸಿದೆ. ಸೋಮವಾರ ದೇಶದ 4 ರಾಜ್ಯಗಳಲ್ಲಿ ಕೋವಿಡ್ ಲಸಿಕೆ ವಿತರಣೆ ಸಂಬಂಧ ಡ್ರೈ ರನ್ ನಡೆಯಿತು.

ಆಂಧ್ರ ಪ್ರದೇಶ, ಗುಜರಾತ್, ಪಂಜಾಬ್ ಹಾಗೂ ರಾಜಸ್ಥಾನ ರಾಜ್ಯಗಳ ತಲಾ ಎರಡು ಜಿಲ್ಲೆಗಳನ್ನು ಆಯ್ದುಕೊಳ್ಳಲಾಗಿತ್ತು. ಅಲ್ಲಿ ತಲಾ 100 ಜನ ಫಲಾನುಭವಿಗಳನ್ನು ಗುರುತಿಸಿ ಲಸಿಕೆ ಹಂಚಿಕೆ ಮಾಡುವ ಅಣಕು ಕಾರ್ಯಾಚರಣೆ ನಡೆಸಲಾಯಿತು.

ಹೇಗೆ ಟಿವಿ ಚಾನಲ್ ಗಳನ್ನು ಆನ್ ಏರ್ ಮಾಡುವುದಕ್ಕೂ ಪೂರ್ವದಲ್ಲಿ ನಿಜ ಸ್ವರೂಪದಲ್ಲೇ ಕಾರ್ಯಾಚರಿಸಿ ಸಿಬ್ಬಂದಿಯ ಕ್ಷಮತೆ ಹಾಗೂ ತಪ್ಪುಗಳನ್ನು ಗುರುತಿಸಲಾಗುತ್ತದೆಯೋ ಹಾಗೇ ಇಲ್ಲೂ ಪರೀಕ್ಷೆ ನಡೆಸಲಾಗಿದೆ.

ನಿಗದಿತ‌ ಉಷ್ಣಾಂಶದ ವಾಹನಗಳಲ್ಲಿ ಲಸಿಕೆ ಸಾಗಣೆ, ವ್ಯಾಕ್ಸಿನ್ ಪೂರೈಕೆಯ ಬಗ್ಗೆ ಫಲಾನುಭವಿ ಮೊಬೈಲ್ ಗೆ ಸಂದೇಶ ರವಾನೆ, ಪ್ರತಿ ಫಲಾನುಭವಿ ಬಂದು ಆಸ್ಪತ್ರೆಯಲ್ಲಿ 30 ನಿಮಿಷ ಕೂರಿಸುವುದು ಮುಂತಾದ ಎಲ್ಲ ಹಂತದ ಕಾರ್ಯಾಚರಣೆ ನಡೆಸಲಾಯಿತು.

ಈ ಎಲ್ಲ ಕಾರ್ಯಾಚರಣೆಯನ್ನು ಕೇಂದ್ರೀಯ ಸರ್ವರ್ ನಿಂದ ನಿರಂತರವಾಗಿ ಟ್ರ್ಯಾಕ್ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಭಾರತ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿದ್ದರಿಂದ ಇಲ್ಲಿ ಯಶಸ್ವಿಯಾಗಿ ಲಸಿಕೆ ಪೂರೈಕೆ ಮಾಡುವುದು ದೊಡ್ಡ ಸವಾಲು. ಇದರಿಂದ ಕೇಂದ್ರ ಸರ್ಕಾರ ವ್ಯವಸ್ಥಿತ ಸಿದ್ಧತೆ ನಡೆಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...