ದೇಶಾದ್ಯಂತ ಲಾಕ್ಡೌನ್ ಜಾರಿಯಾದ ಬಳಿಕ ಉತ್ತರದ ಪ್ರದೇಶದಲ್ಲಿರುವ ಹುಟ್ಟೂರು ದೇವಾರಿಗೆ ವಾಪಸ್ಸಾಗುತ್ತಿದ್ದ ಕಾರ್ಮಿಕರಾದ ಅಮೃತ್ ಕುಮಾರ್ ಹಾಗೂ ಮೊಹಮ್ಮದ್ ಸೈಯದ್ ಬದುಕಲ್ಲಿ ವಿಧಿ ಆಟವಾಡಿತ್ತು. ನಿತ್ರಾಣದಿಂದ ಅಮೃತ್ ಸಾವಿಗೀಡಾಗಿದ್ದ.
ಸ್ನೇಹಿತನ ಸಾವಿನ ಅಂತಿಮ ಕ್ಷಣದವರೆಗೂ ಆತನ ಜೀವ ಉಳಿಸಲು ಹೋರಾಡಿದ್ದ ಮಹಮ್ಮದ್ ಸೈಯದ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದಾದ ಬಳಿಕವೂ ಅಮೃತ್ ಕುಟುಂಬಕ್ಕೆ ಮನೆ ಮಗನಾಗಿ ನಿಂತ ಮಹ ಅಮೃತ್ ಕನಸಿನಂತೆ ಆಕೆಯ ಸಹೋದರಿಯ ಮದುವೆ ಮಾಡಿಸಿದ್ದಾನೆ.
2. ಸೈಕಲ್ ಸವಾರಿ ಮಾಡಿ ಇವಾಂಕ ಟ್ರಂಪ್ ಗಮನ ಸೆಳೆದಿದ್ದ ಜ್ಯೋತಿ ಕುಮಾರಿ
ದೇಶಾದ್ಯಂತ ಲಾಕ್ಡೌನ್ ಜಾರಿಯಾದ ವೇಳೆ ಬಿಹಾರದಲ್ಲಿದ್ದ ತಂದೆ ಮಗಳು ಸೆಕೆಂಡ್ ಹ್ಯಾಂಡ್ ಸೈಕಲ್ ಒಂದನ್ನ ಖರೀದಿ ಮಾಡಿ ಕೇವಲ 7 ದಿನಗಳಲ್ಲಿ 1200 ಕಿಲೋಮೀಟರ್ ಸವಾರಿ ಮಾಡಿ ತನ್ನೂರನ್ನ ತಲುಪಿದ್ದರು. ಬಾಲಕಿಯ ಸಾಧನೆ ನೋಡಿ ಇವಾಂಕಾ ಟ್ರಂಪ್ ಕೂಡ ಟ್ವಿಟರ್ನಲ್ಲಿ ಮೆಚ್ಚುಗೆ ಮಾತುಗಳನ್ನಾಡಿದರು.
ಅನೇಕರು ಜ್ಯೋತಿ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡೋದಾಗಿ ಹೇಳಿದ್ದರು. ಆದರೆ ನಮಗೆ ಭರವಸೆ ಸಿಕ್ಕಿದೆಯೇ ಹೊರತು ಹೇಳುಕೊಳ್ಳುವಂತಹ ಸಹಾಯ ಸಿಕ್ಕಿಲ್ಲ ಎಂದು ಜ್ಯೋತಿ ಕುಟುಂಬ ಹೇಳಿಕೊಂಡಿದೆ.
3. ಹಣವಿಲ್ಲ, ಕೆಲಸವೂ ಇಲ್ಲ, ದೆಹಲಿಗೆ ಹಿಂತಿರುಗೋ ಮಾತೇ ಇಲ್ಲ
ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕನೊಬ್ಬ ದೆಹಲಿಯ ನಿಜಾಮುದ್ದೀನ್ ಸೇತುವೆ ಮೇಲೆ ಕುಳಿತಿದ್ದ ವ್ಯಕ್ತಿ ಯಾರಿಗೂ ಕರೆ ಮಾಡಿ ಅಳುತ್ತಿದ್ದ. ಈ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಮಗನ ಮುಖವನ್ನ ನೋಡೋಕೂ ಹೋಗಲಾಗದೇ ಈತ ಅಸಹಾಯಕನಾಗಿದ್ದ. ಹೇಗೋ ರೈಲು ಟಿಕೆಟ್ ಪಡೆದು ಬೇಗುಸರೈ ತಲುಪೋವಷ್ಟರಲ್ಲಿ ಮಗ ಸಾವನ್ನಪ್ಪಿದ್ದ.
ಈತನ ಕಷ್ಟ ನೋಡಿದ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ 1 ಲಕ್ಷ ರೂ. ಧನ ಸಹಾಯ ಮಾಡಿದ್ದರು. ಗ್ರಾಮಸ್ಥರು ಕೂಡ ಬಟ್ಟೆ ಹಾಗೂ ಧನಸಹಾಯ ಮಾಡಿದ್ದರು. ಇದನ್ನ ಬಿಟ್ಟರೆ ಈತನಿಗೆ ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಮತ್ತೆ ಜೇಬು ಖಾಲಿಯಾಗಿದ್ದು ರಾಮ್ಪುಕರ್ ಪಂಡಿತ್ ಸಂಕಷ್ಟದಲ್ಲಿದ್ದಾನೆ.