2020 ವರ್ಷ ಆರಂಭವಾದ ದಿನದಿಂದಲೂ ಒಂದರ ಮೇಲೊಂದು ದುರಂತ ದೇಶದಲ್ಲಿ ಸಂಭವಿಸುತ್ತಲೇ ಇದೆ. ಅದರಲ್ಲೂ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾದಿಂದ ಚೇತರಿಸಿಕೊಳ್ಳುವ ಮೊದಲೇ, ಒಡಿಶಾದಲ್ಲಿ ಭೂಕಂಪವಾಗಿರುವುದರಿಂದ ನೆಟ್ಟಿಗರು ಪುನಃ ಈ ವರ್ಷದ ದುರಾದೃಷ್ಟವನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಕಸರ್ನಾಟಕವೂ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆ ಪ್ರವಾಹ ಭೀತಿಯನ್ನು ಸೃಷ್ಟಿಸಿದೆ.
ಒಡಿಶಾದಲ್ಲಿ 3.9 ಕಂಪನದ ಅನುಭವ ಶುರುವಾಗಿದೆ. ಭೂಕಂಪನ ಕೇಂದ್ರದಿಂದ ನೈರುತ್ಯ ಭಾಗದಲ್ಲಿ 73 ಕಿಮೀ ದೂರದಲ್ಲಿ ಭೂಕಂಪ ಕಾಣಿಸಿಕೊಂಡಿರುವುದು ದಾಖಲಾಗಿದೆ. ಲಘು ಭೂಕಂಪವಾಗಿರುವುದರಿಂದ, ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಕೊರೊನಾ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಇರಬೇಕಾದವರೂ, ಭೂಮಿ ಕಂಪನವಾಗಿದ್ದರಿಂದ ಮನೆಯಿಂದ ಆಚೆ ಬಂದು ನಿಂತಿದ್ದಾರೆ.
ಇದರಿಂದ ನೆಟ್ಟಿಗರು ಭಾರಿ ಬೇಸರ ವ್ಯಕ್ತಪಡಿಸಿದ್ದು, ಈ ವರ್ಷದಲ್ಲಿ ಇನ್ನು ಏನನ್ನು ನೋಡುವುದು ಬಾಕಿಯಿದೆಯೋ? ಎಂದು ತರಹೇವಾರಿ ಮೆಮ್ಸ್‌ಗಳನ್ನು ಹಾಕಿದ್ದಾರೆ. ಇದೀಗ ಈ ಪೋಸ್ಟ್‌ಗಳು ಭಾರಿ ವೈರಲ್ ಆಗಿದೆ.
https://twitter.com/TrulyDev/status/1291961872845963266?ref_src=twsrc%5Etfw%7Ctwcamp%5Etweetembed%7Ctwterm%5E1291961872845963266%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fwhat-else-2020-social-media-cracks-up-with-memes-as-earthquake-jolts-odisha-2768935.html