
ವಾಟ್ಸಾಪ್ನಲ್ಲಿ ಬಂದಿದ್ದ ವಿಡಿಯೋವನ್ನ ಶೇರ್ ಮಾಡಿದ್ದ ರಮೇಶ್, ಕೊಡಗಿನಲ್ಲಿ ಕಂಡು ಬಂದ ದೃಶ್ಯವಿದು ಎಂದು ಹೇಳಿದ್ದರು.
ವಿಡಿಯೋದಲ್ಲಿ ಹುಲಿಯೊಂದು ಯಾರದ್ದೂ ಮನೆಯ ಬಳಿ ನೀರು ತುಂಬಿಸಿ ಇಡಲಾಗಿದ್ದ ಟಬ್ನ್ನ ನೋಡುತ್ತೆ. ಮೊದಲು ಹಿಂಜರಿಕೆಯನ್ನ ಹೊಂದಿದ್ದ ಹುಲಿ ಬಳಿಕ ಸುತ್ತಮುತ್ತ ಯಾರೂ ಇಲ್ಲ ಅನ್ನೋದನ್ನ ಗೊತ್ತುಪಡಿಸಿಕೊಂಡು ನೀರಿನೊಳಗೆ ಇಳಿದು ಎಂಜಾಯ್ ಮಾಡುತ್ತಿದೆ. ಡಿಸೆಂಬರ್ 7ನೇ ತಾರೀಖಿನಂದು ಟ್ವಿಟರ್ನಲ್ಲಿ ರಮೇಶ್ ಈ ವಿಡಿಯೋ ಶೇರ್ ಮಾಡಿದ್ದರು.
ಟ್ವಿಟರ್ನಲ್ಲಿ ಸದಾ ಕಾಲ ಆಕ್ಟಿವ್ ಆಗಿರುವ ಆನಂದ್ ಮಹೀಂದ್ರಾ ಈ ಟ್ವೀಟ್ನ್ನ ರಿಟ್ವೀಟ್ ಮಾಡಿ ತಮ್ಮ ಬಾಲ್ಯದ ಕ್ಷಣಗಳನ್ನ ನೆನಪಿಸಿಕೊಂಡಿದ್ದಾರೆ. ನಮ್ಮ ಬಾಲ್ಯದ ರಜಾ ದಿನಗಳನ್ನ ಹೆಚ್ಚಾಗಿ ನಾಗರಹೊಳೆ ಅಭಯಾರಣ್ಯದಿಂದ ಕೇವಲ 6 ಮೈಲಿ ದೂರದಲ್ಲಿದ್ದ ನಮ್ಮ ಕೊಡಗಿನ ಮನೆಯಲ್ಲಿ ಕಳೆಯುತ್ತಿದ್ದೆವು. ಆದರೆ ನನಗೆ ಎಂದಿಗೂ ಹುಲಿಯನ್ನ ನೇರವಾಗಿ ನೋಡುವ ಅವಕಾಶ ಸಿಗಲೇ ಇಲ್ಲ. ಹುಲಿ ಬಳಕೆ ಮಾಡಿರುವ ಈ ಟಬ್ನ್ನ ಜಾಕುಜ್ಜಿ ಎಂದು ಕರೆಯಲಾಗುತ್ತೆ. ಆದರೆ ಇದನ್ನ ಹುಲಿ ಬಳಕೆ ಮಾಡ್ತಾ ಇರೋದ್ರಿಂದ ಇನ್ಮೇಲೆ ಇದನ್ನ ಟಿಕುಜ್ಜಿ ಎಂದು ಕರೆಯಬಹುದು ಅಂತಾ ಹಾಸ್ಯ ಚಟಾಕಿ ಹಾರಿಸಿದ್ದಾರೆ.