ಭೂಮಿ ಮೇಲಿರುವ ಪ್ರಾಣಿ ಸಂಕುಲಗಳಲ್ಲಿರುವ ಭಿನ್ನತೆಗಳನ್ನು ನೋಡುವುದೇ ಆನಂದ. ಕೊರೋನಾ ಲಾಕ್ ಡೌನ್ ಆರಂಭವಾದ ಬಳಿಕವಂತೂ, ಪ್ರಾಣಿಗಳ ಹೊಸ ಬಗೆಯ ಫೋಟೋಗಳು ಕಂಡರೆ ಭಾರಿ ವೈರಲ್ ಆಗುತ್ತಿವೆ.
ಕೆಲದಿನಗಳ ಹಿಂದಷ್ಟೇ ರಾಜ್ಯದ ಕಬಿನಿ ಹಿನ್ನೀರಲ್ಲಿ ಸಿಕ್ಕ ಕರಿಚಿರತೆ ಭಾರಿ ಸದ್ದು ಮಾಡಿತ್ತು. ಇದೀಗ ಅಸ್ಸಾಂನಲ್ಲಿ ಸಿಕ್ಕಿರುವ ಗೋಲ್ಡನ್ ಟೈಗರ್ ಫೋಟೋ ಚರ್ಚೆಗೆ ಗ್ರಾಸವಾಗಿದೆ. ಈ ರೀತಿಯ ಹುಲಿ ಭಾರತದಲ್ಲಿ ಇದೊಂದೇ ಲಭ್ಯವಿರುವುದು ಎಂದು
ಹೇಳಲಾಗಿದೆ.
ಈ ಫೋಟೋ ಖಾಜಿರಂಗ ಅಭಯಾರಣ್ಯದಲ್ಲಿ ತೆಗೆಯಲಾಗಿದ್ದು, ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ಫೋಟೋವನ್ನು ಶೇರ್ ಮಾಡಿದ್ದಾರೆ.
ಮಯುರೀಷ್ ಹೆಂಡ್ರೆ ಎನ್ನುವವರು ಈ ಫೋಟೋವನ್ನು ತೆಗೆದಿದ್ದಾರೆ ಎಂದು ಕಸ್ವಾನ್ ಹೇಳಿದ್ದಾರೆ. ಇದೀಗ ಈ ಫೋಟೋ ಭಾರಿ ವೈರಲ್ ಆಗಿದ್ದು, ಹುಲಿಯ ಈ ನೋಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.