alex Certify ಮೀನು ಹಿಡಿದು ರಾತ್ರೋರಾತ್ರಿ ಲಕ್ಷಾಧೀಶೆಯಾದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನು ಹಿಡಿದು ರಾತ್ರೋರಾತ್ರಿ ಲಕ್ಷಾಧೀಶೆಯಾದ ಮಹಿಳೆ

ಬರೋಬ್ಬರಿ 52 ಕೆಜಿ ಮೀನೊಂದನ್ನು ಹಿಡಿದ ಮಹಿಳೆಯೊಬ್ಬರು ರಾತ್ರೋರಾತ್ರಿ ಸಿರಿವಂತರಾದ ಘಟನೆ ಪಶ್ಚಿಮ ಬಂಗಾಳದಲ್ಲಿ ಘಟಿಸಿದೆ. ಇಲ್ಲಿನ ಸಾಗರ ದ್ವೀಪದ ಬಳಿ ಇರುವ ಚಕ್ಫುಲ್‌ಬುದಿ ಎಂಬ ಗ್ರಾಮದಲ್ಲಿ ಬೋಲಾ ಹೆಸರಿನ ಈ ಭಾರೀ ಮೀನನ್ನು ಹಿಡಿದಿದ್ದಾರೆ ಪುಷ್ಪಾ ಕಾರ್‌.

ಅವರ ಈ ಭಾರೀ ಬೇಟೆಗೆ ಮೂರು ಲಕ್ಷ ರೂ.ಗಳ ಸಂಪಾದನೆ ಆಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಈ ಮೀನು ಪ್ರತಿ ಕೆಜಿಗೆ 6,200 ರೂ.ಗಳಂತೆ ಮಾರಾಟವಾಗಿದೆ. ತಮ್ಮ ಈ ಕ್ಯಾಚ್‌ನಿಂದ ಮೂರು ಲಕ್ಷ ರೂ.ಗಳು ಸಿಕ್ಕಿವೆ ಎಂದು ಪುಷ್ಪಾ ಖಾತ್ರಿಪಡಿಸಿದ್ದಾರೆ.

ಮೀನನ್ನು ನದಿಯಿಂದ ಊರಿಗೆ ತರಲು ಬಹಳ ಪ್ರಯಾಸ ಪಟ್ಟ ಪುಷ್ಪಾಗೆ ಗ್ರಾಮಸ್ಥರು ನೆರವಾಗಿದ್ದು, ಅದನ್ನು ಮಾರುಕಟ್ಟೆಗೆ ಕೊಂಡೊಯ್ಯಲೂ ಸಹ ಜೊತೆಯಾಗಿದ್ದಾರೆ.

ಬೆಂಗಾಲಿಯಲ್ಲಿ ’ಭೋಲಾ’ ಎಂದು ಕರೆಯಲಾಗುವ ಈ ಮೀನಿಗೆ ಭಾರೀ ಬೆಲೆಯಿದ್ದು, ಅದರ ಕೊಬ್ಬನ್ನು ಆಗ್ನೇಯ ಏಷ್ಯಾದ ದೇಶಗಳಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...