ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಆನ್ಲೈನ್ನಲ್ಲಿ ಸಖತ್ತಾಗಿ ಸದ್ದು ಮಾಡುತ್ತಿರುವ 45 ಸೆಕೆಂಡ್ಗಳ ಈ ಕ್ಲಿಪ್ನಲ್ಲಿ 66 ವರ್ಷದ ಬ್ಯಾನರ್ಜಿ ಅವರು ಸಂತಾಲಿ ನೃತ್ಯಗಾತಿಯರೊಂದಿಗೆ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದಾಗಿದೆ.
ಮಕ್ಕಳ ಪಾಲಿಗೆ ನಿರಾಶೆ ಮೂಡಿಸಿದ ಕೇಂದ್ರ ಬಜೆಟ್
ಮಾಸ್ಕ್ಧಾರಿ ನೃತ್ಯಗಾತಿಯರು ಸಿಎಂ ಅವರ ಕೈಗಳನ್ನು ಹಿಡಿದುಕೊಂಡು ಭಾರೀ ಉತ್ಸಾಹದಿಂದ ತಾವೂ ಹೆಜ್ಜೆ ಹಾಕುತ್ತಿದ್ದಾರೆ. ಕಳೆದ ತಿಂಗಳು ಬುಡಕಟ್ಟು ಗ್ರಾಮವೊಂದರಲ್ಲಿ ಬ್ಯಾನರ್ಜಿ ಅಡುಗೆ ಮಾಡುವ ವಿಡಿಯೋವೊಂದು ವೈರಲ್ ಆಗಿತ್ತು.