
ಕಳೆದ ನವೆಂಬರ್‌ನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಸಾಕಷ್ಟು ಕಡೆಗಳಿಂದ ಥರಾವರಿ ಬೆಂಬಲ ಸಿಕ್ಕಿದೆ. ಸಾಮಾನ್ಯ ಜನತೆ ಮಾತ್ರವಲ್ಲದೇ ಸೆಲೆಬ್ರಿಟಿಗಳಿಂದಲೂ ಸಹ ರೈತರಿಗೆ ಬೆಂಬಲ ಸಿಕ್ಕಿದೆ.
ಇದೀಗ ರೈತರಿಗೆ ಬೆಂಬಲ ಕೊಡುವ ಘೋಷವಾಕ್ಯವಿರುವ ವಿವಾಹ ಆಮಂತ್ರಣ ಪತ್ರವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಕಿರುತೆರೆ ನಟ ಸುಶಾಂತ್ ಸಿಂಗ್ ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ
“ಕಪ್ಪು ಕಾನೂನು ವಾಪಸ್ ಪಡೆದು, ಕನಿಷ್ಠ ಬೆಂಬಲ ಬೆಲೆ ಖಾತ್ರಿ ಮಾಡಿ” ಎಂದು ಕಾರ್ಡ್ ಮೇಲೆ ಬರೆಯಲಾಗಿದೆ. ಆಮಂತ್ರಣ ಪತ್ರದಲ್ಲಿ ರೈತನ ಚಿತ್ರವನ್ನು ಹಾಕಲಾಗಿದೆ.
