ನವದೆಹಲಿ: ಚೀನಾದಿಂದ ಹುಟ್ಟಿದ ಕೊರೊನಾ ವಿಶ್ವದ ನಾನಾ ದೇಶಗಳುಗೆ ಹರಡಿ ನರಕ ಸೃಷ್ಟಿಸಿದೆ. ಆರೋಗ್ಯದ ಭಯ ಒಂದೆಡೆಯಾದರೆ, ಲಾಕ್‌ಡೌನ್ ನಿಂದ ವ್ಯಾಪಾರ, ವಹಿವಾಟು ಕುಸಿದಿದೆ. ಉದ್ಯೋಗ ನಷ್ಟವಾಗಿದೆ. ‘ ‘ಸಂಕಟ ಕಾಲೆ ವೆಂಕಟರಮಣ ಧ್ಯಾನಂ’ ಎಂಬುದು ಭಾರತೀಯರ ಪರಿ. ದೇವರನ್ನು ನೆನೆದರೆ ಎಂಥ ದುರ್ಗತಿಯೂ ದೂರವಾಗುತ್ತದೆ ಎಂದು ಜನ ನಂಬುತ್ತಾರೆ.
ಜನರ ಈ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಕೊರೊನಾ ಕಾಲದಲ್ಲಿ ಆನ್ ಲೈನ್ ಪೂಜೆಗಳು ಹುಟ್ಟಿಕೊಂಡಿವೆ. ಶಕ್ತಿಪೀಠ ಡಿಜಿಟಲ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಆನ್ ಲೈನ್ ಪೂಜೆಯ ಮಾಹಿತಿಯನ್ನು ಜುಲೈ 11 ರಂದು ಹಂಚಿಕೊಳ್ಳಲಾಗಿದೆ.
ದುರ್ಗಾ ದೇವಿಯನ್ನು ಆರಾಧಿಸಿದರೆ, ಕೊರೊನಾ ಕಂಟಕ ನಿವಾರಣೆಯಾಗಲಿದೆ. 2100 ರೂ.ಮತ್ತು ಆನ್‌ಲೈನ್ ವೆಚ್ಚವಾಗಿ ಜಿ ಎಸ್ ಟಿ ಪಾವತಿಸಿದರೆ, ದುರ್ಗಾ ಸಪ್ತಶತಿ ಪಾಠ ಮಾಡಿ ಪ್ರಸಾದ ಕಳಿಸಲಾಗುವುದು. ಇದರಿಂದ ಕೊರೊನಾ ಕಂಟಕ ನಿವಾರಣೆಯಾಗಲಿದೆ. ಆರೊಗ್ಯ ವೃದ್ಧಿಯಾಗಲಿದೆ. ಧೀರ್ಘಾಯುಷ್ಯ ಲಭ್ಯವಾಗಲಿದ್ದು, ಆರ್ಥಿಕ ಸಂಕಷ್ಟ ನಿವಾರಣೆಯಾಗಲಿದೆ ಎಂದು ಬರೆಯಲಾಗಿದೆ.
https://www.instagram.com/p/CCf0NnLJUHF/?utm_source=ig_embed