alex Certify ಮಾಸ್ಕ್ ಹಾಕಲು ಕಿರಿಕಿರಿಯೇ…? 12ನೇ ತರಗತಿ ವಿದ್ಯಾರ್ಥಿನಿ ಕಂಡು ಹಿಡಿದಿದ್ದಾಳೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಹಾಕಲು ಕಿರಿಕಿರಿಯೇ…? 12ನೇ ತರಗತಿ ವಿದ್ಯಾರ್ಥಿನಿ ಕಂಡು ಹಿಡಿದಿದ್ದಾಳೆ ಪರಿಹಾರ

Wearing Face Mask Causing Pain in Ears? 17-Year-Old Girl from West Bengal Has an Innovative Solution

ಕೋವಿಡ್-19 ಕಾಲಘಟ್ಟದಲ್ಲಿ ಮನೆಯಿಂದ ಹೊರಗೆ ಹೋಗುವ ಮುನ್ನ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೋಗುವುದು ಕಡ್ಡಾಯವಾಗಿಬಿಟ್ಟಿದೆ. ಆದರೆ ಮಾಸ್ಕ್‌ಗಳನ್ನು ಯಾವಾಗಲೂ ಹಾಕಿಕೊಳ್ಳುವುದು ಬಹಳಷ್ಟು ಜನರಿಗೆ ಕಿರಿಕಿರಿ ಅನುಭವ. ಬಹಳ ಕಾಲ ಹಾಕಿಕೊಂಡಿದ್ದರೆ ಕಿವಿಗಳಲ್ಲಿ ನೋವು ಕಾಣಿಸಿಕೊಂಡು ಬಿಡುತ್ತದೆ.

ಇದೀಗ ಈ ಸಮಸ್ಯೆಗೆ ಪಶ್ಚಿಮ ಬಂಗಾಳದ ಪೂರ್ವ ಬರ್ಧಮನ್ ಜಿಲ್ಲೆಯ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಾಸ್ಕ್‌ಗಳಿಂದ ಕಿವಿ ಮೇಲೆ ಬೀಳುವ ಒತ್ತಡ ಕಡಿಮೆ ಮಾಡಲು ಐಡಿಯಾವೊಂದನ್ನು ಮಾಡಿದ್ದಾರೆ. ಬಳಕೆಯಲ್ಲಿಲ್ಲದ ಪ್ಲಾಸ್ಟಿಕ್ ಅಥವಾ ಫ್ಲೆಕ್ಸಿಬಲ್ ಬೋರ್ಡ್ ಬಳಸಿ ಈ ವಿಶೇಷ ಬ್ಯಾಂಡ್‌ಗಳನ್ನು ತಯಾರಿಸಲಾಗಿದೆ.

ಇಲ್ಲಿನ ವಿದ್ಯಾಸಾಗರ ಸ್ಮೃತಿ ವಿದ್ಯಾಮಂದಿರ ದಿಗಂತಿಕಾ ಬೋಸ್‌ ಹೆಸರಿನ ಈ ವಿದ್ಯಾರ್ಥಿನಿ ಮಾಡಿದ ಆವಿಷ್ಕಾರಕ್ಕಾಗಿ 2020ರ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...