
1. ಚಾಡ್ವಿಕ್ ಬೋಸ್ಮನ್ ಕೊನೆಯ ಟ್ವೀಟ್: 2020ರಲ್ಲಿ ನಿಧನರಾದ ಬಾಲಿವುಡ್ ನಟ ಬೋಸ್ಮನ್ರ ಟ್ವಿಟರ್ ಖಾತೆಯಲ್ಲಿ ಮಾಡಿದ ಕೊನೆಯ ಟ್ವೀಟ್ ಈ ವರ್ಷ ಅತೀ ಹೆಚ್ಚು ರೀ ಟ್ವೀಟ್ಗಳನ್ನ ಪಡೆದುಕೊಂಡಿದೆ. ಆಗಸ್ಟ್ 28ರಂದು ಬೋಸ್ಮನ್ ನಿಧನರಾದ ಸುದ್ದಿಯನ್ನ ಕುಟುಂಬಸ್ಥರು ಟ್ವಿಟರ್ನಲ್ಲಿ ಶೇರ್ ಮಾಡಿದ್ದರು.
2. ಕಮಲಾ ಹ್ಯಾರಿಸ್ ಟ್ವೀಟ್: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಚುನಾವಣೆಯಲ್ಲಿ ಗೆದ್ದ ಬಳಿಕ ಜೋ ಬಿಡೆನ್ ಶುಭಾಶಯ ಕೋರುವ ಸಮಯದಲ್ಲಿ ಕೊನೆಗೂ ನಾವು ಸಾಧಿಸಿದೆವು ಎಂದು ಬರೆದುಕೊಂಡಿದ್ದರು. ಇದು 2ನೇ ಅತಿ ಹೆಚ್ಚು ಲೈಕ್ಸ್ ಪಡೆದ ಟ್ವೀಟ್ ಆಗಿದೆ.
3. ಎನ್ಬಿಎ ಸ್ಟಾರ್ ಕೋಬ್ ಬ್ರ್ಯಾಂಟ್ ನಿಧನದ ಸುದ್ದಿಗೆ ಬರಾಕ್ ಒಬಾಮ ಟ್ವಿಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದರು. 3.9 ಮಿಲಿಯನ್ ಲೈಕ್ಸ್ ಪಡೆದಿರುವ ಈ ಟ್ವೀಟ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
4. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ತಾವು ಪೋಷಕರಾಗುತ್ತಿರುವ ವಿಚಾರವನ್ನ ಶೇರ್ ಮಾಡಿದ್ದರು. ಇದು ವಿಶ್ವದಲ್ಲೆ ನಾಲ್ಕನೇ ಫೇಮಸ್ ಟ್ವೀಟ್ ಆಗಿದ್ದರೆ ಭಾರತದಲ್ಲಿ ಮೊದಲ ಸ್ಥಾನ ಪಡೆದಿದೆ.
ಇನ್ನುಳಿದಂತೆ ದೀಪ ಹಚ್ಚುವ ಬಗ್ಗೆ ಪ್ರಧಾನಿ ಮೋದಿ ಟ್ವೀಟ್, ಅಮೆರಿಕನ್ ಕಾಮಿಡಿಯನ್ ಆಂಡಿ ಮಿಲೋಂಕೀಸ್ ಟ್ವೀಟ್, ಅಮಿತಾಬ್ ಬಚ್ಚನ್ ಕೊರೊನಾ ಪಾಸಿಟಿವ್ ಆದ ಟ್ವೀಟ್ , ಪ್ರಧಾನಿ ಮೋದಿಗೆ ಧೋನಿ ಧನ್ಯವಾದ ಹೇಳಿದ ಟ್ವೀಟ್ಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.