ಕೃಷಿ ಮಸೂದೆ ಖಂಡಿಸಿ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರನ್ನ ಕೇಂದ್ರ ಸರ್ಕಾರ ಎರಡನೇ ಸುತ್ತಿಗೆ ಮಾತುಕತೆಗೆ ಆಹ್ವಾನಿಸಿತ್ತು. ಮಾತುಕತೆಗೆ ಹಾಜರಾಗಿದ್ದ ರೈತರು ಸರ್ಕಾರದ ವತಿಯಿಂದ ನೀಡಲಾದ ಆಹಾರವನ್ನೂ ನಿರಾಕರಿಸಿದ್ದಾರೆ.
ರೈತರೊಂದಿಗಿನ ಸಭೆಯಲ್ಲಿ ಊಟದ ವಿರಾಮದ ವೇಳೆ ಸರ್ಕಾರ ರೈತರಿಗಾಗಿ ಊಟದ ವ್ಯವಸ್ಥೆ ಮಾಡಿತ್ತು. ಆದರೆ ಸರ್ಕಾರದ ಆಹ್ವಾನಕ್ಕೆ ಕೈ ಮುಗಿದ ರೈತ ಮುಖಂಡ ನಮ್ಮ ಆಹಾರವನ್ನ ನಾವೇ ತಂದುಕೊಂಡಿದ್ದೇವೆ. ಸರ್ಕಾರದಿಂದ ನಮಗೆ ನ್ಯಾಯದ ಹೊರತಾಗಿ ಒಂದು ಲೋಟ ಚಹಾ ಕೂಡ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ಸರ್ಕಾರದ ಊಟವನ್ನೂ ಬೇಡವೆಂದ ಅನ್ನದಾತರು..!
03-12-2020 4:54PM IST / No Comments / Posted In: Latest News, India