ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ತಿಂಡಿಗಳನ್ನ ಶೇರ್ ಮಾಡುವವರಿಗೆ ಬರಗಾಲವಿಲ್ಲ. ಖಾರ ಜಿಲೇಬಿ, ಸ್ವೀಟ್ ಗೋಭಿ ಸೇರಿದಂತೆ ಚಿತ್ರ ವಿಚಿತ್ರ ತಿನಿಸುಗಳನ್ನ ಸೋಶಿಯಲ್ ಮೀಡಿಯಾ ಕಂಡಿದೆ. ಇದೀಗ ಇನ್ಸ್ಟಾಗ್ರಾಂನಲ್ಲಿ ಚಹ ಐಸ್ಕ್ರೀಂ ತಯಾರಿಸಲಾಗಿದ್ದು ಇದನ್ನ ನೋಡ್ತಿದ್ರೇನೆ ನಿಮ್ಮ ಬಾಯಲ್ಲಿ ನೀರೂರಲಿದೆ.
ಫುಡ್ ಬ್ಲಾಗರ್ ಆಗಿರುವ ಮಹಿಮಾ ಇನ್ಸ್ಟಾಗ್ರಾಂನಲ್ಲಿ ಈ ರೆಸಿಪಿಯನ್ನ ಶೇರ್ ಮಾಡಿದ್ದಾರೆ. ಇದಕ್ಕೆ ಚಾಯ್ ಬಿಸ್ಕಟ್ ಪಾಪ್ಸಿಕಲ್ ಎಂದು ಹೆಸರಿಟ್ಟಿದ್ದಾರೆ. ಪಾರ್ಲೆ ಜಿ ಬಿಸ್ಕಟ್ನ್ನು ಪುಡಿ ಮಾಡಿ ಇದನ್ನ ಮೌಲ್ಡ್ಸ್ಗೆ ಹಾಕಿ ಇದಕ್ಕೆ ಚಹಾವನ್ನ ಹಾಕಿದ್ದಾರೆ. ಇದನ್ನ ಫ್ರಿಡ್ಜ್ನಲ್ಲಿ ಇಟ್ಟ ಬಳಿಕ ಐಸ್ಕ್ರೀಂ ರೆಡಿಯಾಗಿದೆ.
ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು ಚಹಾ ಪ್ರಿಯರು ಖಂಡಿತವಾಗಿಯೂ ಈ ರೆಸಿಪಿಯನ್ನ ಟ್ರೈ ಮಾಡಿ ನೋಡ್ತೇವೆ ಎಂದು ಹೇಳ್ತಿದ್ದಾರೆ.
https://www.instagram.com/p/COpwP0-BIzh/?utm_source=ig_web_copy_link