
ಹಸಿರು ವಲಯದಲ್ಲಿ ವೈದ್ಯನೊಬ್ಬ ತನ್ನ ಗಂಟಲ ದ್ರವವನ್ನು ತಾನೇ ತೆಗೆದು ಕೋವಿಡ್ ಪರೀಕ್ಷೆಗೆ ಒಳಗಾದ ಪ್ರಸಂಗ ನಡೆದಿದೆ.
ಲಕ್ನೋದ ಆರ್ ಎಂ ಎಲ್ ಆಸ್ಪತ್ರೆಯ ಸ್ಥಾನಿಕ ವೈದ್ಯನೊಬ್ಬ ತನ್ನ ಗಂಟಲ ದ್ರವವನ್ನು ತಾನೇ ತೆಗೆಯುತ್ತಿದ್ದು, ಈ ವಿಡಿಯೋ ಈಗ ಭಾರೀ ವೈರಲ್ ಆಗಿದೆ.
ಸ್ವತಃ ಶುಶ್ರೂಷಕಿಯೇ ವಿಡಿಯೋ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಘಟನೆ ತನ್ನ ವಾರ್ಡಿನಲ್ಲಿ ನಡೆದದ್ದಲ್ಲ. ಆದರೆ, ಏನು ಮಾಡಬೇಕೆಂದು ದಿಕ್ಕು ತೋಚದೆಯೇ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಿಕೊಳ್ಳಲಾಗಿದೆ.
ವಿಡಿಯೋದಲ್ಲಿ ಇರುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಸೂಕ್ತ ಕ್ರಮವನ್ನೂ ವಹಿಸಲಾಗುತ್ತದೆ ಎಂದು ಆರ್ ಎಂ ಎಲ್ ವಕ್ತಾರ ಡಾ.ಶ್ರಿಕೇಶ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
https://www.youtube.com/watch?time_continue=2&v=1xmIYFshMpM&feature=emb_logo