ಭಾರೀ ಪ್ರವಾಹದ ವಿರುದ್ಧ ಹೋರಾಡಿ ದಣಿದ ಘೇಂಡಾಮೃಗದ ಮರಿಯೊಂದು ಬಹಳ ಸುಸ್ತಾಗಿ ರಸ್ತೆಯ ಮೇಲೆ ಹಾಗೇ ತಲೆ ಹಾಕಿಕೊಂಡು ಮಲಗಿಬಿಟ್ಟಿರುವ ವಿಡಿಯೋವೊಂದು ಟ್ವಿಟರ್‌ನಲ್ಲಿ ಹರಿದಾಡುತ್ತಿದೆ.
ಕಾಜಿರಂಗ ರಾಷ್ಟ್ರೀಯ ಅಭಯಾರಣ್ಯದ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗಿಬಿಟ್ಟಿರುವ ಈ ಘೇಂಡಾಮೃಗವನ್ನು ಮರಳಿ ಅರಣ್ಯದೊಳಗೆ ಕಳುಹಿಸಲು ಪ್ರಯತ್ನಗಳು ನಡೆದವು. ಇದೇ ವೇಳೆ ಘೇಂಡಾಮೃಗವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾವಲು ಕಾದಿದ್ದು, ಆ ಸಂದರ್ಭದಲ್ಲಿ ವಾಹನಗಳ ಸವಾರರು ನಿಧಾನವಾಗಿ ಚಲಿಸಿದ್ದಾರೆ.
ಲಕ್ಷಾಂತರ ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆ ಆಗುವ ಮಟ್ಟಿಗೆ ಅಬ್ಬರಿಸುತ್ತಿರುವ ಪ್ರವಾಹದ ಕಾರಣದಿಂದ ಸಾವಿರಾರು ಪ್ರಾಣಿಗಳು ನಿರಾಶ್ರಿತವಾಗಿದ್ದು, ಆಹಾರ ಸಿಗದೇ ಬಹಳ ಕಂಗಾಲಾಗಿವೆ.