ರಾತ್ರಿ ಅರಳಿ ಬೆಳಗಾಗುವುದರಲ್ಲಿ ಬಾಡುವ ಬ್ರಹ್ಮ ಕಮಲ ಹೂವಿನ 49 ಸೆಕೆಂಡಿನ ವಿಡಿಯೋಗೆ ಭಾರೀ ಜನಮೆಚ್ಚುಗೆ ವ್ಯಕ್ತವಾಗಿದೆ.
ಕಳ್ಳಿ ಜಾತಿಗೆ ಸೇರಿದ ಬ್ರಹ್ಮಕಮಲವನ್ನು ರಾತ್ರಿ ರಾಣಿ ಎಂದೇ ಕರೆಯುವುದುಂಟು. ಇದು ಹೂವು ಬಿಡುವುದೇ ಅಪರೂಪ. ಬಿಟ್ಟರೂ ಹಗಲಿನಲ್ಲಿ ಅರಳುವುದಿಲ್ಲ. ಬದಲಿಗೆ ರಾತ್ರಿ ಹೊತ್ತಿನಲ್ಲೇ ಅರಳಿ ನಿಲ್ಲುತ್ತದೆ.
ಸೂರ್ಯ ಹುಟ್ಟುವುದರಲ್ಲಿ ಮಲಗಿಬಿಡುತ್ತದೆ. ಸಾಧಾರಣವಾಗಿ ಬೇಸಿಗೆಯ ನಂತರ ಮಳೆಗಾಲ ಆರಂಭವಾದ ಬಳಿಕ ಅರಳುವುದೇ ಹೆಚ್ಚು.
ಹೂವು ಅರಳುವುದರಿಂದ ಹಿಡಿದು ಬಾಡುವವರೆಗಿನ ಪ್ರತಿ ಹಂತದ ಸುಂದರತೆಯನ್ನೂ ಸೆರೆ ಹಿಡಿದಿದ್ದು,
ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ 49 ಸೆಕೆಂಡಿನ ಪೋಸ್ಟ್ ನ್ನು 62 ಸಾವಿರ ಜನರು ಕಣ್ತುಂಬಿಕೊಂಡಿದ್ದಾರೆ.
https://twitter.com/iatemuggles/status/1292168456754925568?ref_src=twsrc%5Etfw%7Ctwcamp%5Etweetembed%7Ctwterm%5E1292168456754925568%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fwatch-timelapse-video-shows-beautiful-flower-that-only-blooms-at-night-2777513.html