ನಿರ್ಮಾಣ ಕಾಮಗಾರಿ ನಡೆಯುತ್ತಿದ್ದುದರಿಂದ ಸಂಜೆಯ ಹೊತ್ತಿಗೆ ಹೆದ್ದಾರಿಯಲ್ಲಿ ವಾಹನ ಸಂಚಾರ ಜಾಸ್ತಿ ಇತ್ತು. ಆಗ ಕಾಡಿನಿಂದ ಬಂದ ದೊಡ್ಡ ಕೆಂಪು ಪಟ್ಟೆ ಹುಲಿ ರಸ್ತೆಯ ಮಧ್ಯದಲ್ಲಿ ಮಲಗಿ, ಬಾಯಿಂದ ನಾಲಿಗೆ ಹೊರ ತೆಗೆದು ಉಸಿರಾಡುತ್ತ ಶಾಂತ ಚಿತ್ತವಾಗಿ ವಿಶ್ರಾಂತಿ ಪಡೆಯಲಾರಂಭಿಸಿತು. ಆದರೆ, ಹೆದ್ದಾರಿಯ ಇಕ್ಕೆಲಗಳಲ್ಲಿ ನಿಂತ ವಾಹನ ಸವಾರರಿಗೆ ಟೆನ್ಶನ್ ಶುರುವಾಗಿತ್ತು. ಸುಮಾರು ಹೊತ್ತಿನವರೆಗೂ ವಾಹನ ಸಂಚಾರ ಬಂದಾಗಿತ್ತು.
ಒಂದು ಪೊಲೀಸ್ ತಂಡ ಹಾಗೂ ನಂತರ ಅರಣ್ಯ ಇಲಾಖೆಯ ತಂಡ ಸ್ಥಳಕ್ಕಾಗಮಿಸಿ ಹುಲಿಯನ್ನು ಹಿಡಿಯುವ ಅಥವಾ ಓಡಿಸುವ ತಯಾರಿಯಲ್ಲಿತ್ತು. ಆದರೆ, ಹುಲಿ ತಾನಾಗಿಯೇ ಎದ್ದು ಕಾಡಿನತ್ತ ಹೆಜ್ಜೆ ಹಾಕಿದೆ. ವಿಡಿಯೋವನ್ನು 30 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಹುಲಿ ಜನಸಂಚಾರದ ಪ್ರದೇಶದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಹಕ್ಕೆ ಸಿಲುಕಿದ ಹುಲಿ ರೈತರೊಬ್ಬರ ಡೈರಿಯೊಳಗೆ ಬಂದು ರಕ್ಷಣ ಪಡೆದಿತ್ತು.