
ಮಾನವ ಮತ್ತು ಚಿರತೆ ನಡುವೆ ಅನೇಕ ಭಾರಿ ಸಂಘರ್ಷ ನಡೆಯುತ್ತಲೇ ಇರುತ್ತದೆ. ಆದರೆ ಕೆಲವೊಮ್ಮೆ ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋಗುವ ಹಲವು ಘಟನೆಗಳು ನಡೆದಿವೆ. ಇದೀಗ ಅದೇ ರೀತಿಯ ಘಟನೆ ನಡೆದಿದೆ.
ಹೌದು, ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಟ್ವೀಟರ್‌ನಲ್ಲಿ ಶೇರ್ ಮಾಡಿರುವ ವಿಡಿಯೊದಲ್ಲಿ, ವ್ಯಕ್ತಿಯೊಬ್ಬ ಮಲಗಿದ್ದು ಆತನ ಪಕ್ಕದಲ್ಲಿ ಚಿರತೆಯೊಂದು ಬಂದು ಮಲಗಿದೆ. ಇದಾಗುತ್ತಿದ್ದಂತೆ ಇನ್ನೆರಡು ಬೃಹತ್ ಚಿರತೆ ಬಂದು ಆತನ ಪಕ್ಕದಲ್ಲಿ ಸುಮ್ಮನೆ ಮಲಗಿವೆ. ಈ ವಿಡಿಯೊ ಇದೀಗ ಭಾರಿ ವೈರಲ್ ಆಗಿದೆ.
ಕಸ್ವಾನ್ ಈ ವಿಡಿಯೊ ಶೇರ್ ಮಾಡುತ್ತಿದ್ದಂತೆ ಅನೇಕರು ಶಾಕ್ ಆಗಿದ್ದು , ಆ ವ್ಯಕ್ತಿ ಅದೃಷ್ಟವಂತನೆಂದು ಕೆಲವರು ಹೇಳಿದರೆ, ಇನ್ನು ಕೆಲವರು ಚಿರತೆಗಳೊಂದಿಗಿನ ಮನುಷ್ಯನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೊವನ್ನು 15 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ಐದು ಸಾವಿರಕ್ಕೂ ಹೆಚ್ಚು ರಿಟ್ವೀಟ್ ಮಾಡಿದ್ದಾರೆ.