
ಬುಧವಾರ ಪುಣೆಯ ಪ್ರಭಾತ್ ರಸ್ತೆಯಲ್ಲಿರುವ ಸಿಂಬಯೋಸಿಸ್ ಶಾಲೆಗೆ 5ನೇ ತರಗತಿ ಮಕ್ಕಳು ವಾಪಸ್ಸಾಗಿದ್ರು. ಒಂದು ವರ್ಷದ ಬಳಿಕ ಶಾಲೆಯ ಕಡೆ ಮುಖ ಮಾಡಿದ ಮಕ್ಕಳಿಗೆ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ನೃತ್ಯ ಮಾಡುವ ಮೂಲಕ ಸ್ವಾಗತ ಕೋರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆಲ್ಲುತ್ತಿದೆ.
ಹೆರಿಗೆಗೂ ಕೆಲವೇ ಗಂಟೆ ಮುಂಚೆ ಸೇವೆಗೆ ಹಾಜರಾಗಿ ಮಾದರಿಯಾದ್ರು ಈ ಮೇಯರ್..!
ಟ್ವಿಟರ್ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದ ಶಾಲೆಯ ಪ್ರಾಂಶುಪಾಲೆ ವಿದ್ಯಾ ಯೆರವ್ಡೇಕರ್ ಕೊರೊನಾದಿಂದಾಗಿ ಮಕ್ಕಳು ಬಲವಂತವಾಗಿ ಶಾಲೆಗೆ ಬರಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗ ಮಕ್ಕಳು ಶಾಲೆಗೆ ಮರಳುತ್ತಿದ್ದಾರೆ. ಈ ದಿನವನ್ನ ನಾವು ಸಂಭ್ರಮಿಸೋಣ ಎಂದು ಪ್ಲಾನ್ ಮಾಡಿದ್ದೆವು. ಹೀಗಾಗಿ ಈ ಪ್ರಯತ್ನ ಮಾಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.