
ಕೃಷಿ ಕ್ಷೇತ್ರದ ಸುಧಾರಣೆ ಸಂಬಂಧ ತರಲಾದ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗಳಿಗೆ ಸಖತ್ತಾಗಿ ಮೀಡಿಯಾ ಕವರೇಜ್ ಸಿಗುತ್ತಿದೆ. ಕೇಂದ್ರ ಸಚಿವರು ಬಂದು ಪ್ರತಿಭಟನಾಕಾರರ ಮನವೊಲಿಸುವ ಯತ್ನ ನಡೆಸಿದ ಬಳಿಕವೂ ಸಹ ಯಾವುದೇ ಸುಖಾಂತ್ಯ ಕಾಣದ ಈ ಹೋರಾಟ ಇನ್ನೂ ಮುಂದುವರೆದಿದೆ.
ಪ್ರತಿಭಟನೆಯಲ್ಲಿ ಅನೇಕ ಯುವಕರೂ ಸಹ ಸೇರಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ವೇಳೆ ಪೊಲೀಸರು ಲಾಠಿ ಚಾರ್ಜ್, ಜಲಫಿರಂಗಿಯಂಥ ಕ್ರಮಗಳಿಗೆ ಮೊರೆ ಹೋಗಬೇಕಾಗಿ ಬಂದಿದೆ.
ಇಂಥದ್ದೇ ಘಟನೆಯೊಂದರ ವೇಳೆ, ಪೊಲೀಸರ ಜಲಫಿರಂಗಿ ಪ್ರಯೋಗಕ್ಕೂ ಹೆದರದ ಯುವಕನೊಬ್ಬ ಚಳಿಯಲ್ಲೂ ಸಹ ನೀರು ತನ್ನ ಮೈಮೇಲೆ ಚಿಮ್ಮುತ್ತಿದ್ದರೂ ಹಾಗೇ ನಿಂತಿರುವ ವಿಡಿಯೋವೊಂದು ವೈರಲ್ ಆಗಿದೆ.
https://www.instagram.com/p/CISYiTmgksP/?utm_source=ig_web_copy_link