ನೊಬೆಲ್ ಪುರಸ್ಕೃತ ಸಿ.ವಿ. ರಾಮನ್ ತಮ್ಮ ಅತ್ಯಮೋಘ ಕೊಡುಗೆಗಳ ಮೂಲಕ ಭಾರತೀಯ ವೈಜ್ಞಾನಿಕ ಸಮುದಾಯಕ್ಕೆ ಕಳಶಪ್ರಾಯರಾಗಿದ್ದಾರೆ. ಬೆಳಕಿನ ವಿಭಜನೆ ಸಂಬಂಧ ರಾಮನ್ ಮಾಡಿದ ಸಂಶೋಧನಾ ಕೆಲಸಕ್ಕೆ ಅವರಿಗೆ ನೊಬೆಲ್ ಪುರಸ್ಕಾರವೂ ಸಿಕ್ಕಿತ್ತು.
1930ರಲ್ಲಿ ನೊಬೆಲ್ ಪುರಸ್ಕಾರವನ್ನು ರಾಮನ್ ಸ್ವೀಡನ್‌ನ ಸ್ಟಾಕ್‌ಹೋಂನಲ್ಲಿ ಸ್ವೀಕಾರ ಮಾಡುತ್ತಿರುವ ವಿಡಿಯೋ ಕ್ಲಿಪ್ ಒಂದು ನೆಟ್‌ನಲ್ಲಿ ವೈರಲ್ ಆಗಿದೆ. ಕ್ಲಿಪ್‌ನಲ್ಲಿ ರಾಮನ್ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ಆದರೆ ಆಡಿಯೋ ಇಲ್ಲದ ಕಾರಣ ಅವರ ಮಾತುಗಳನ್ನು ಕೇಳಲು ಆಗುತ್ತಿಲ್ಲ.
ಡಿಸೆಂಬರ್ 10, 1930ರಲ್ಲಿ ನಡೆದ ಈ ಕಾರ್ಯಕ್ರಮದ 25 ಸೆಕೆಂಡ್‌ಗಳ ಕ್ಲಿಪ್ ನೆಟ್ಟಿಗರಲ್ಲಿ ಭಾರೀ ಪುಳಕ ಮೂಡಿಸಿದ್ದು, ಕಾಮೆಂಟ್‌ಗಳ ರೂಪದಲ್ಲಿ ಒಳ್ಳೊಳ್ಳೆ ಪ್ರತಿಕ್ರಿಯೆಗಳು ಬರುತ್ತಿವೆ.